ಲೋಕಾ ಬಲೆಗೆ ಬಿದ್ದ ದೇವನಹಳ್ಳಿ ಪೊಲೀಸರು. ಪೋಕ್ಸೋ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆ ಲೋಕಾಯುಕ್ತ ಎಸ್ ಪಿ ಕೆ.ವಂಶಿಕೃಷ್ಣ , ಡಿವೈಎಸ್ಪಿ ನಾಗೇಶ್ ಹಸ್ಲರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನೊಂದ ಯುವತಿ ಕಡೆಯವರ ಬಳಿ ದೇವನಹಳ್ಳಿ ಠಾಣೆ ಪಿಎಸ್ಐ ಜಗದೇವಿ ಹಾಗೂ ಪಿಸಿ ಮಂಜುನಾಥ್ 75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಿಎಸ್ಐ ಜಗದೇವಿ ಪರ ಪೊಲೀಸ್ ಪೇದೆ ಅಂಬರೀಶ್ ಮುಂಗಡವಾಗಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೋಕ್ಸೋ ಕಾಯ್ದೆ ಪ್ರಕರಣ ವಿಚಾರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು. ಪಿಎಸ್ಐ ಜಗದೇವಿ ಅವರು ಪೊಲೀಸ್ ಪೇದೆ ಅಂಬರೀಷ್ ಕೈಗೆ ಲಂಚ ಕೊಡಲು ಹೇಳಿದ್ದ ಆಡಿಯೋ ವೈರಲ್ ಆಗಿದೆ. ಚಾರ್ಜ್ ಶೀಟ್ ಬಲಿಷ್ಠವಾಗಿ ರೂಪಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಜಗದೇವಿ.
ಮಾತುಕತೆಯಂತೆ ಇಂದು ಹಣ ಪಡೆಯಲು ಜಗದೇವಿ ಬದಲಿಗೆ ಪಿಸಿ ಅಂಬರೀಶ್ ಬಂದಿದ್ದರು. ಅಂಬರೀಶ್ ಬಲೆಗೆ ಬೀಳ್ತಿದ್ದಂತೆ ಪಿಎಸ್ಐ ಜಗದೇವಿ ಮತ್ತು ಪಿಸಿ ಮಂಜುನಾಥ್ ಪರಾರಿಯಾಗಿದ್ದಾರೆ.
ಪಿಸಿ ಅಂಬರೀಶ್ ನನ್ನ ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.