ದೇವನಹಳ್ಳಿ ಪೊಲೀಸರು ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳನ ಬಂಧನ ಮಾಡಿದ್ದಾರೆ. ಆಂಧ್ರಪ್ರದೇಶ ಮೂಲದ ಚಿತ್ತಪ್ಪಗಾರಿ ಆನಂದ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಯಿಂದ ಬರೊಬ್ಬರಿ 36 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆನಂದ್ ಖಾಕಿ ವಶದಲ್ಲಿದ್ದಾನೆ. ಸುಮಾರು 17 ಪೊಲೀಸ್ ಠಾಣೆಗಳಲ್ಲಿ ಆನಂದ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಚಿತ್ತಗಾರಿ ಆನಂದ್ ಹೆಡೆಮುರಿ ಕಟ್ಟುವಲ್ಲಿ ದೇವನಹಳ್ಳಿ ಪೊಲೀಸ್ ಯಶಸ್ವಿಯಾಗಿದ್ದಾರೆ.
ದೇವನಹಳ್ಳಿ ಎಸಿಪಿ ನವೀನ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರಾಕೇಶ್ ನೇತೃದಲ್ಲಿ ಕಾರ್ಯಾಚರಣೆ ನಡೆಸಿ ಈ ಖರ್ನಾಕ್ ಬೈಕ್ ಕಳ್ಳನನ್ನು ಬಂಧನ ಮಾಡಲಾಗಿದೆ.