ದುಷ್ಕರ್ಮಿಗಳಿಂದ ಹೇಯ ಕೃತ್ಯ: ಫಸಲುಯುಕ್ತ ದ್ರಾಕ್ಷಿ ತೋಟ ನಾಶ

ಮನುಷ್ಯ ಮನುಷ್ಯರ ಮಧ್ಯೆ ದ್ವೇಶ ಈರ್ಶೆಗಳೆಷ್ಟಿದ್ದರೆ ನೇರ ನೇರ ಫೈಟ್ ಮಾಡಿಕೊಳ್ಳಲಿ. ಅದರ ಬದಲಿಗೆ ಪ್ರಕೃತಿ ಸೌಂದರ್ಯದ ಮೇಲೆ ದೌರ್ಜನ್ಯ ತೋರುವ ಮೂಲಕ ರೋಷಾವೇಶ ತೋರ್ಪಡಿಸಿಕೊಳ್ಳೋದು ಎಷ್ಟು ಸರಿ…. ಅಂತದೊಂದು ಘಟನೆಗೆ ತಡರಾತ್ರಿ ಚಿಕ್ಕಬಳ್ಳಾಪುರದ ಗ್ರಾಮವೊಂದರಲ್ಲಿ ನಡೆದಿದೆ….

ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ-ಕಡಶೀಗನಹಳ್ಳಿ ಮಧ್ಯೆ ಇರುವ ಕಾಂತಮ್ಮ ನಾರಾಯಣಸ್ವಾಮಿ ಹೆಸರಿಗೆ ಸೇರಿದ ಎರಡು ಎಕರೆಯಲ್ಲಿ ಹಾಕಿದ್ದ ದ್ರಾಕ್ಷಿ ತೋಟ ಫಸಲಿಗೆ ಬಂದಿತ್ತು.

ತಡರಾತ್ರಿ ಏಕಾಏಕಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 50 ರಿಂದ 60 ದ್ರಾಕ್ಷಿ ಗಿಡಗಳು,‌ ದ್ರಾಕ್ಷಿ ಚಪ್ಪರದ ಚಪ್ಪಡಿಗಳು, ಪೆನ್ಸಿಂಗ್ ಮೆಶ್ ಬಲೆ, ದ್ರಾಕ್ಷಿಗೆ ಅಳವಡಿಸಿದ್ದ ಡ್ರಿಪ್ ಪೈಪುಗಳನ್ನು ಕತ್ತರಿಸಿ ನೆಳಕ್ಕುರುಳಿಸಿದ್ದಾರೆ.

ಸುಮಾರು ಇಪ್ಪತೈದು ಜನ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಕೃತ್ಯದಿಂದ ಸುಮಾರು ಹತ್ತು ಲಕ್ಷದಷ್ಟು ನಷ್ಟ ಹೊಂದಿರಬಹುದು ಎನ್ನಲಾಗಿದೆ.

ಈ ಕೃತ್ಯದ ಬಗ್ಗೆ ಮಾತನಾಡಿರುವ ಮಾಲೀಕ ನಾರಾಯಣಸ್ವಾಮಿ, ರಸ್ತೆ ವಿಚಾರವಾಗಿ ಅಕಾಶ್, ರತ್ನಮ್ಮ, ಶಿವಕುಮಾರ್ ಕುಟುಂಬದ ಜತೆ ವ್ಯಾಜ್ಯವಿತ್ತು. ಈ ಹಿಂದೆಯೂ ಸಹ ಒಮ್ಮೆ ಹೀಗಾಗಿತ್ತು. ಆ ದಿನ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಕ್ರಮ ಜರುಗಿಸಲಿಲ್ಲ. ಅದೆ ದೈರ್ಯದ ಮೇಲೆ ಇವತ್ತು ಈ ಕೃತ್ಯ ಎಸಗಿದ್ದಾರೆ. ಒಂದು ವೇಳೆ ಅಷ್ಟೊತ್ತಲ್ಲಿ ನಾವೇನಾದ್ರು ಅಡ್ಡಬಂದಿದ್ದರೆ ನಮಗೂ ಸಾವು ಕಾದಿತ್ತೇನೋ ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದೇವೆ. ಈ ಬಾರಿಯಾದ್ರು ಈ ಘಟನೆಗೆ ಕಾರಣರಾದವನ್ನ, ಅವರ ಹಿಂಬಾಲಕರನ್ನ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಅವಲತ್ತುಕೊಂಡಿದ್ದಾರೆ.

ನಾರಾಯಣಸ್ವಾಮಿ ಪುತ್ರ ಪ್ರದೀಪ್ ಮಾತನಾಡಿ, ರಾಕ್ಷಸರು ಮಾಡೋ ಕೆಲಸ ಮಾಡಿದ್ದಾರೆ. ಅವರ ಜತೆ ಬಂದಿದ್ದಂತಹ ಎಲ್ಲ ಗ್ಯಾಂಗ್ ನ್ನು ಬಂಧಿಸಬೇಕು. ಅವರನ್ನ ಬೀದಿಯಲ್ಲಿ ಮೆರವಣಿಗೆ ಮಾಡಬೇಕು. ಹಾಕಿದ್ದ ಬಂಡವಾಳ ಕೈಗೆ ಸಿಗುತ್ತೆ ಅಂತ ಆಸೆಗಣ್ಣುಗಳಿಂದ ಕಾಯುತಿದ್ದ ವೇಳೆ ಫಸಲು ತುಂಬಿದ ದ್ರಾಕ್ಷಿಯನ್ನ ಕತ್ತರಿಸಿ ಬಿಸಾಕಿದ ದರುಳರನ್ನ ಕೂಡಲೆ ಬಂಧಿಸಿ ಕ್ರಮ ಜರುಗಿಸಬೇಕೆಂದು ಎಸ್ ಪಿ ಕುಶಾಲ್ ಚೌಕ್ಸೆಯಲ್ಲಿ ಮನವಿ ಮಾಡಿದ್ದಾರೆ.

ಇನ್ನೂ ನಂದಿಗಿರಿಧಾಮ ಪೊಲೀಸರು ದೂರು ಬಂದ ಕೂಡಲೆ ಎಚ್ವೆತ್ತುಕೊಂಡು ಈ ಕೃತ್ಯದಲ್ಲಿ ಪಾಲ್ಗೊಂಡವರನ್ನ ಬಂಧಿಸಿ ಅನ್ಯಾಯಕ್ಕೊಳಗಾದ ರೈತರ ಅಳಲಿಗೆ ಸ್ಪಂದಿಸುವರೆ ಕಾದು ನೋಡಬೇಕಿದೆ….

Ramesh Babu

Journalist

Recent Posts

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

25 minutes ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

1 hour ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

21 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

23 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

24 hours ago