ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ ಬೆಳ್ತಂಗಡಿಯ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯದ್ಯಂತ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಸಮುದಾಯದ ಜೊತೆ ಸೇರಿಕೊಂಡು ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಈಗಾಗಲೇ ರಾಜ್ಯದ್ಯಂತ 1650 ಶಿಬಿರಗಳನ್ನು ಏರ್ಪಡಿಸಿ ಮದ್ಯಪಾನಕ್ಕೆ ಬಲಿಬಿದ್ದ ವ್ಯಸನಿಗಳನ್ನು 8 ದಿನಗಳ ಕಾಲ ಶಿಬಿರ ನಡೆಸಿ ಯೋಗ, ಧ್ಯಾನ, ಮನೋವೈದ್ಯರಿಂದ ಚಿಕಿತ್ಸೆ, ಧಾರ್ಮಿಕ ವಿಚಾರಗಳಿಂದ ಕೂಡಿದ ಮಾಹಿತಿಗಳ ಮೂಲಕ ಈವರೆಗೆ 150000 ಮಂದಿಯನ್ನು ಮದ್ಯಪಾನ ಮುಕ್ತರನ್ನಾಗಿಸಲಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಡಿ ಕ್ರಾಸ್ ಹತ್ತಿರದಲ್ಲಿರುವ ಬಾಬು ಜಗಜೀವನ್ ರಾಮ್ ಭವನದಲ್ಲಿ ದಿನಾಂಕ 05.04 2023 ರಿಂದ 12.04.2023 ರವರೆಗೆ ಒಂದು ವಾರಗಳ ಕಾಲ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.