ಪ್ರತಿಯೊಬ್ಬರು ವಿಶ್ವ ಮಾನವೀಯತೆಯನ್ನು ಬೆಳಸಿಕೊಳ್ಳಬೇಕು ಎಂದು ಆಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ನಗರದ ಕೆ.ಎಂ.ಹೆಚ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಕಿ ಇಲ್ಲದೆ ಹಾಲನ್ನು ಉಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸಂಬಂಧಗಳು ಗಟ್ಟಿಯಾಗಬೇಕು, ಮನಸ್ಸು ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು, ಜನರಲ್ಲಿರುವ ಮೌಢ್ಯವನ್ನು ದೂರಗೊಳಿಸುವ ಕೆಲಸ ಆಗಬೇಕಿದೆ, ವಿದ್ಯಾವಂತರಲ್ಲಿಯೇ ಮೌಢ್ಯತೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದರ್ಶಗಳನ್ನು ಬಯಸುವ ಬದಲು ತಮ್ಮೊಳಗೆ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕಾಗಿದೆ. ಬುದ್ದ, ಬಸವ, ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸುವ ಮೂಲಕ ಉತ್ತಮವಾದ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಿದೆ. ಬಸವಣ್ಣನವರ ಚಿಂತನೆಯಂತೆ ಪರಿಶುದ್ಧ ಮನಸ್ಸುನಿಂದ ಕೆಲಸ ಮಾಡಬೇಕು.
ತೋಂಟದಾರ್ಯ ಮಠದ ನಿಜಗುಣ ಪ್ರಭು ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜನತೆ ತನ್ನ ಮೇಲೆ ವಿಶ್ವಾಸ ಕಳೆದುಕೊಂಡು ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಜೀವಿಸುತ್ತಿದ್ದಾರೆ. ಕಷ್ಟ, ಸಮಸ್ಯೆಗಳಿಗೆ ದುಡಿಮೆಯೇ ಪರಿಹಾರ, ಪೂಜೆ ಪುನಸ್ಕಾರಗಳು ಅಲ್ಲ. ಅಜ್ಞಾನದಿಂದ ಸಮಾಜ ಕತ್ತಲೆಯಲ್ಲಿ ಮುಳುಗಿದೆ. ದುಡಿಮೇಯ ಮೇಲೆ ಭವಿಷ್ಯ ಇದೆ. ಪ್ರಶಸ್ತಿ ಪಡೆದವರು ಮೂಢನಂಬಿಕೆಗೆ ಒಳಪಡದಿರಿ. ಹೆಚ್.ನರಸಿಂಹಯ್ಯನವರ ಜೀವನ ಇಂದಿನ ಯುವ ಜನತೆಗೆ ಮಾದರಿ.
ಸಂವಿಧಾನವನ್ನು ಮಕ್ಕಳಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ತಿಳುದುಕೊಳ್ಳಬೇಕು. ಇದಕ್ಕೆ ಸರ್ಕಾರ ಯೋಜನೆ ರೂಪಿಸಬೇಕು. ಇಂದು ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡಿದ್ದಾರೆ. ಇದನ್ನು ಅಳಿಸಿ ಹಾಕಬೇಕು ಎಂದರು. ನಿಜವಾಗಿ ಮೌಢ್ಯವನ್ನು ಅನುಸರಿಸುವವರೆ ವಿದ್ಯಾವಂತರಾಗಿದ್ದಾರೆ, ಅನೇಕರು ಜ್ಯೋತಿಷ್ಯದ ಹೆಸರಿನಲ್ಲಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಪ್ರಕೃತಿ ನೀಡಿದ ಸಹಜವಾದ ಬದುಕನ್ನು ನಡೆಸುವ ಮೂಲಕ ಸರಳವಾಗಿ ಜೀವನವನ್ನು ರೂಪಿಸಿಕೊಳ್ಳಬೇಕು. ಮೊದಲು ಬದುಕುವ ಧರ್ಮವನ್ನು ಪಾಲಿಸಬೇಕಾಗಿದೆ. ನಿಜವಾದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದ ಸಾಕ್ಷರತ್ಕಾರವನ್ನು ಬೆಳೆಸಬೇಕಾಗಿದೆ ಎಂದರು.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡ ಮಾತನಾಡಿ ಗೌರವ ಸನ್ಮಾನಗಳು ದೊರಕುವುದು ಅವರ ಶ್ರಮದ ಪ್ರತಿಫಲವಾಗಿದೆ, ಯಾವುದೇ ಫಲಾಪೇಕ್ಷೆಯನ್ನು ಬಯಸದೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಋಣವನ್ನು ತೀರಿಸುವ ಕಾರ್ಯ ಮೆಚ್ಚುವಂತಹದ್ದಾಗಿದೆ. ನಮ್ಮಲ್ಲಿ ಅನೇಕ ಸಮಸ್ಯೆಗಳು ಇನ್ನೂ ಸಹ ಜೀವಂತವಾಗಿವೆ ಅವುಗಳನ್ನು ಹೋರಾಟ ಮಾಡುವ ಮೂಲಕ ಬಗೆಹರಿಸುವ ಕೆಲಸ ಮಾಡಬೇಕಿದೆ. ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕವೆ ಪಡೆದುಕೊಳ್ಳುವಂತಾಗಬೇಕಾಗಿದೆ. ಸರ್ಕಾರ ಮಾಡುವಂತಹ ಕಾರ್ಯವನ್ನು ಸಂಸ್ಥೆಯು ನಡೆಸುತ್ತಿರುವುದು ವಿಶೇಷವಾಗಿದೆ.
ಕಾನೂನಿನ ಅರಿವು ಪ್ರತಿಯೊಬ್ಬರಲ್ಲೂ ಇರಬೇಕಾಗಿದೆ, ನೈಜವಾದ ಕಾನೂನುಗಳನ್ನು ತಿಳಿದುಕೊಳ್ಳಬೇಕು ಅದಕ್ಕೆ ಪೂರಕವಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಂವಿಧಾನದ ಅರಿವು ಆಗಬೇಕಾಗಿದೆ ಎಂದರು.
ಈ ವೇಳೆ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್, ಶಾಸಕ ಧೀರಜ್ ಮುನಿರಾಜ್, ಎನ್.ಬಿ.ಎಸ್.ಎಸ್ ನ ಅಧ್ಯಕ್ಷ ಡಾ.ಸೋಮಶೇಖರ್, ಗಣ್ಯರಾದ ಕೇಂದ್ರ ಸರ್ಕಾರದ ಅಧಿಕಾರಿ ನರಂಸಿಂಹರಾಜು, ಕೆ.ಎಂ.ಹನುಮಂತರಾಯಪ್ಪ, ವೈದ್ಯ ಡಾ.ಅಂಜಿನಪ್ಪ, ಡಾ.ಜಿ.ಎಸ್.ಶ್ರೀಧರ್, ಹಂಪಿಕೆರೆ ರಾಜೇಂದ್ರ ಹೊಸಪೇಟೆ, ಇಂದುಮತಿ ಸಾಲಿಮಠ, ಬಿ.ಎಂ.ಇರ್ಷಾದ್ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…