ನಾಡಿನೆಲ್ಲಡೆ ಬೆಳಕಿನ ಹಬ್ಬವಾದ ದೀಪಾವಳಿಯನ್ನ ಅದ್ಧೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲರ ಮನದಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ನಗರದ ನ್ಯಾಷನಲ್ ಪ್ರೈಡ್ ಶಾಲೆಯ ವಿದ್ಯಾರ್ಥಿಗಳು ಪಟಾಕಿ ಹೊಡೆಯುವ ಬದಲು ದೀಪಗಳನ್ನು ಬೆಳಗುವ ಮೂಲಕ ಪರಿಸರ ಸ್ನೇಹಿ ಹಬ್ಬದ ಆಚರಣೆಯನ್ನು ಪ್ರತಿಪಾದಿಸಿದರು.
ಪಟಾಕಿ ಸುಡುವುದರಿಂದ ಪರಿಸರಕ್ಕೆ ಹಾನಿ, ಜೊತೆಗೆ ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತು ತರುತ್ತದೆ. ಪಟಾಕಿ ಬಿಟ್ಟು ದೀಪ ಬೆಳಗುವ ಮೂಲಕ ಬೆಳಕಿನ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು.
ಈ ವೇಳೆ ಶಾಲೆಯ ಮುಖ್ಯಸ್ಥರು, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.