ದೀಪಾವಳಿ ಸಡಗರ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಜಗಮಗಿಸಿದ “ಪ್ರಕಾಶ ಪರ್ವ” ಸಂಭ್ರಮ

ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದಲ್ಲಿರುವ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ “ಪ್ರಕಾಶ ಪರ್ವ” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಶಾಲೆ ತುಂಬೆಲ್ಲಾ ಪರಿಸರ ಸ್ನೇಹಿ ಸಾಲು ಸಾಲು ದೀಪ ಬೆಳಗುವ ಮೂಲಕ ಮಕ್ಕಳಿಗೆ ದೀಪಾವಳಿ ಹಬ್ಬದ ಮಹತ್ವ ಸಾರಲಾಯಿತು.

ಶಾಲೆ ಮುಂಭಾಗ, ಆವರಣ, ತರಗತಿಗಳಲ್ಲಿ ಸಾಲು ಸಾಲು ದೀಪಗಳು ಜಗಮಗಿಸಿದವು. ಶಾಲಾ ಆಡಳಿತ ಮಂಡಳಿ, ಮಕ್ಕಳು, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರಕಾಶ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು‌ ದೀಪ ಹಚ್ಚಿ ಸಂಭ್ರಮಸಿದರು.

ಈ ವೇಳೆ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ಕಾರ್ಯಾರ್ಶಿ ಶ್ರೀನಿವಾಸ್ ಮೂರ್ತಿ ಕೆ‌.ಜಿ ಮಾತನಾಡಿ, ದೀಪಾವಳಿ ಜ್ಞಾನದೀಪ ಹಚ್ಚುವ ಸಂಭ್ರಮದ ಹಬ್ಬ. ಅಜ್ಞಾನ, ಅಂಧಕಾರಗಳನ್ನು ಸುಟ್ಟು ಭಸ್ಮ ಮಾಡುವ ಹಬ್ಬ. ಪ್ರಚಂಡ ತೇಜಸ್ಸನ್ನು ಉದ್ದೀಪಿಸುವ ಹಬ್ಬ. ಪುಣ್ಯಪ್ರದ ದಿನಗಳ ಬೆಳಕನ್ನು ಹೆಚ್ಚಿಸುವ, ಅಹಂಕಾರದ ಕತ್ತಲನ್ನು ಕೊಚ್ಚುವ, ದೀಪದ ಹಬ್ಬ. ದೀಪಾವಳಿ ಬಂದರೆ ಸಾಕು ಬೆಳಕಿನ ಬಾಗಿಲು ತೆರೆಯುತ್ತದೆ. ದುಃಖ ದುಗುಡಗಳ ಕತ್ತಲು ಮರೆಯುತ್ತದೆ. ದೇವಭಾವದತ್ತ ಸರಿಯುವ, ಸಜ್ಜನ ಸಂಗದಲ್ಲಿ ಬೆರೆಯುವ, ಹೊಸ ಸಡಗರ-ಸಂತಸದ ಬದುಕನ್ನು ತೆರೆಯುವ, ಸಾಲು ಸಾಲು ದೀಪ ಬೆಳಗುವ ಹಬ್ಬವೇ ದೀಪಾವಳಿ. ಈ‌ ಹಿನ್ನೆಲೆ ನಮ್ಮ ಶಾಲೆಯಲ್ಲಿ ಪ್ರಕಾಶ ಪರ್ವ ಕಾರ್ಯಕ್ರಮವನ್ನು ಆಯೋಜಿಸಿ ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದರು.

ದೀಪಾವಳಿ ಕತ್ತಲಿನಿಂದ ದೂರಸರಿಸುವ ಬದಲು ಜೀವನವನ್ನೇ ಕತ್ತಲು ಮಾಡುವ ಪಟಾಕಿಯಿಂದ ದೂರ ಇರಬೇಕು. ಈಗಾಗಲೇ ಪರಿಸರ ಮಾಲಿನವಾಗಿದೆ. ಮತ್ತಷ್ಟು ಹಾಳು ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಪಟಾಕಿ ಸುಡುವುದರಿಂದ ಅದರಲ್ಲಿನ ಹಾನಿಕಾರಕ ವಿಷ ವಸ್ತುಗಳು ಪರಿಸರಕ್ಕೆ ಸೇರಲಿವೆ. ಇದರಿಂದ ಚರ್ಮವ್ಯಾಧಿ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ನಂತಹ ಹಲವು ಕಾಯಿಲೆಗಳನ್ನು ದುಡ್ಡು ಕೊಟ್ಟು ನಾವೇ ಪಡೆದುಕೊಳ್ಳುವಂತಾಗಲಿದೆ. ವಿಷಕಾರಕ ವಸ್ತು ನೇರವಾಗಿ ಶ್ವಾಸಕೋಶಕ್ಕೆ ಸೇರುವುದರಿಂದ ತೀವ್ರ ಉಸಿರಾಟ ತೊಂದರೆಯಾಗಲಿದೆ ಎಂದು ಹೇಳಿದರು.

ಪಟಾಕಿ ಸುಡುವುದರಿಂದ ನಮಗೆ ಜೊತೆಗೆ ಪ್ರಾಣಿ, ಪಕ್ಷಿಗಳಿಗೆ ಕೂಡ ಕಂಟಕವಾಗುತ್ತದೆ. ಹಾಗಾಗಿ ಮಕ್ಕಳು ಹಠ ಮಾಡದೆ ಪಟಾಕಿ ಸುಡುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ನಂತರ ಪೋಷಕರು ಮಾತನಾಡಿ, ಈ ಶಾಲೆಯಲ್ಲಿ‌ ಪಠ್ಯದ‌ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಿ ಮಕ್ಕಳ ಸರ್ವತೋಮುಖ‌ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂಬ ಭರವಸೆ ನಮ್ಮಲ್ಲಿದೆ. ಇದಕ್ಕೆ ಶ್ರಮಿಸುತ್ತಿರುವ ಲಿಟ್ಲ್ ಮಾಸ್ಟರ್ ಶಾಲೆಗೆ ಧನ್ಯವಾದ ಎಂದು ಹೇಳಿದರು.

ಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ ಪರ್ವ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ದೀಪಾವಳಿ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇದರಲ್ಲಿ ನಾವು ಭಾಗವಹಿಸಿ ಸಂಭ್ರಮಿಸಿದ್ದೇವೆ. ನಮಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ತಿಳಿಸಿದರು..

ನಂತರ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಮಕ್ಕಳ ಜೊತೆಗೆ ಪೋಷಕರು ಪಾಲ್ಗೊಂಡು ವಿವಿಧ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.

ಈ ವೇಳೆ ಅಧ್ಯಕ್ಷೆ ಉಷಾ ಶ್ರೀನಿವಾಸ್, ಮುಖ್ಯಶಿಕ್ಷಕಿ ಶೋಭಾವತಿ ಆರ್, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು….

Ramesh Babu

Journalist

Recent Posts

ಕುಸುಮ್ (ಸೌರ ವಿದ್ಯುತ್) ಯೋಜನೆ ಹೆಸರಲ್ಲಿ ದೇಶ ಕಾಯೋ ಯೋಧರ ಭೂಮಿಗೆ ಬೇಲಿ: ತಬ್ಬಿಬ್ಬಾದ ಯೋಧರ ಕುಟುಂಬ

ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…

7 hours ago

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

7 hours ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

8 hours ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

10 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

13 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

16 hours ago