ದಾವಣೆಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ತಾಲೂಕಿನ ಕುವರಿ: ಗಣ್ಯರಿಂದ ಅಭಿನಂದನೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಎಳ್ಳುಪುರ ನಿವಾಸಿ ಚಂದ್ರಶೇಖರ್ ಹಾಗೂ ರಮಾದೇವಿಯವರು ಮಗಳು  ಮೋನಿಷಾ.ಸಿ ಅವರು ದಾವಣೆಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಸಿ ಯಲ್ಲಿ ಚಿನ್ನದ ಪದಕ ಪಡೆದಿದ್ದು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾರೆ.

ಇವರ ಸಾಧನೆಯನ್ನು ಮೆಚ್ಚಿ ಲಯನ್ ಇಂಟರ್ ನಾಷನಲ್ ಡಿಸ್ಟ್ರಿಕ್ಟ್ 317F ರವರು ಯಲಹಂಕದ ಜಕ್ಕೂರು ಏರೋಡ್ರಂ ಬಳಿಯಿರುವ ಆಟ್ಟಿಡೆ ಬೌಟಿಕ್ಯೂ ಹೋಟೆಲ್ ನಲ್ಲಿ ಸನ್ಮಾನಿಸಿದ್ದಾರೆ.

ಇವರ ಅತ್ಯುತ್ತಮ ಸಾಧನೆಗೆ ಎಳ್ಳುಪುರ ಗ್ರಾಮಸ್ಥರು ಸೇರಿದಂತೆ ಎಳ್ಳುಪುರದ ಮುಖಂಡರಾದ ಲಯನ್ ಎಸ್.ರಾಮಾಂಜಿನಪ್ಪನವರು ತಮ್ಮ ಗ್ರಾಮಕ್ಕೆ ಕೀರ್ತಿ ತಂದ ಹೆಣ್ಣುಮಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *