ದಾಳಿಂಬೆ ಬೆಳೆ ನಿರ್ವಹಣೆಗೆ ಅವಶ್ಯಕ ಜ್ಞಾನ ಅಗತ್ಯ: ಗುಣವಂತ.ಜೆ

ದಾಳಿಂಬೆ ಬೆಳೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಲು ರೈತರಿಗೆ ಅವಶ್ಯಕ ಜ್ಞಾನ ಅಗತ್ಯವಿದ್ದು ವಿಚಾರ ಸಂಕಿರಣ ಕಾರ್ಯಕ್ರಮಗಳು ಸಹಾಯವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ  ತಾಲ್ಲೂಕಿನ ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ದಾಳಿಂಬೆ ಬೆಳೆಯ ಕ್ಷೇತ್ರೋತ್ಸವ ಮತ್ತು ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಊಧ್ಘಾಟಿಸಿ ಅವರು ಮಾತನಾಡಿದರು.

ದಾಳಿಂಬೆ ಬೆಳೆ ನಿರ್ವಹಣೆ ಜ್ಞಾನ ಪಡೆಯಲು ರೈತರಿಗೆ ಸ್ಥಳೀಯವಾಗಿ ವಿಚಾರ ಸಂಕೀರ್ಣ ಕಾರ್ಯಕ್ರಮಗಳು ಆಯೋಜಿಸುವುದರಿಂದ ಹೆಚ್ಚಿನ ಉಪಯೋಗವಾಗುತ್ತದೆ.

ಜಿಲ್ಲೆಯಲ್ಲಿ ಶೇಕಡ 18% ರಷ್ಟು ತೋಟಗಾರಿಕೆ ಪ್ರದೇಶವಿದ್ದು, 27.784 ಹೆಕ್ಟೇರ್ ನಲ್ಲಿ ವಿವಿಧ ತೊಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. 378.12 ಹೆಕ್ಟೇರ್ ನಷ್ಟು  ದಾಳಿಂಬೆ ಬೆಳೆಯುತ್ತಿದ್ದಾರೆ. ಅದರಲ್ಲಿ 200 ಹೆಕ್ಟೇರ್ ನಷ್ಟು ದೇವನಹಳ್ಳಿ ಯಲ್ಲಿ ದಾಳಿಂಬೆ ಬೆಳೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ವಿಜ್ಞಾನಿ ಡಾ.ಗಿರಿಗೌಡ ಮಂಜುನಾಥ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ  ದಾಳಿಂಬೆ ಬೆಳೆ ಗಿಡ ನಾಟಿ ಮಾಡುವ ವಿಧಾನ, ಗೊಬ್ಬರ ಬಳಕೆ ವಿಧಾನ, ರೋಗ ನಿರ್ವಹಣೆ, ಔಷಧಿ ಸಿಂಪರಣೆ, ನೀರು ನಿರ್ವಹಣೆ, ಕೀಟ ನಿರ್ವಹಣೆ, ಕಟಾವು ವಿಧಾನದ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಹೆಚ್ಚಿನ ಮಾಹಿತಿಗಾಗಿ 9916219697 ಸಂಖ್ಯೆಗೆ ವಾಟ್ಸಾಪ್ ಅಥವಾ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕಂಪನಿಗಳ ರಸಗೊಬ್ಬರ, ಔಷಧಿಗಳು, ಯಂತ್ರೋಪಕರಣಗನ್ನು ಪ್ರದರ್ಶಿಸಿ ರೈತರಿಗೆ ಮಾಹಿತಿ ನೀಡಲಾಯಿತು.

ದೇವನಹಳ್ಳಿ ಹಿರಿಯ ತೋಟಗಾರಿಕೆ ನಿರ್ದೇಶಕರಾದ ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ (ರಾಜ್ಯ ವಲಯ) ಗೋಪಾಲ್, ಬಿಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲೆಯ ರೈತರು ಹಾಗೂ ರಸಗೊಬ್ಬರ, ಔಷಧಿ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *