ಜಿದ್ದಾ-ಜಿದ್ದಿನಿಂದ ಕೂಡಿದ್ದ ಕ್ವಾಲಿಫೈಯರ್ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 15 ರನ್ ಅಂತರದಿಂದ ಸೋಲಿಸಿ ದಾಖಲೆಯ 10ನೇ ಬಾರಿ ಫೈನಲ್ ಗೆ ಲಗ್ಗೆಯಿಟ್ಟರು.
ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು, ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ (60) ರನ್ ಹಾಗೂ ಕಾನ್ವೆ(40) ರನ್ ಗಳಿಸುವ ಮೂಲಕ ಮೊದಲ ವಿಕೆಟ್ ನಷ್ಟಕ್ಕೆ 87 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು.
ನಂತರ ಬಂದ ಶಿವಂ ದುಬೆ(1) ಹೆಚ್ಚು ಹೂತ್ತು ನಿಲ್ಲಲಿಲ್ಲ, ಅಂಬಾಟಿ ರಾಯುಡು(17) , ರಹಾನೆ(17) ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ (22) ರನ್ ಗಳಿಸುವ ಮೂಲಕ ತಂಡವನ್ನು 170ರ ಗಡಿ ದಾಟಿಸಿದರು. ಗುಜರಾತ್ ಟೈಟಾನ್ಸ್ ಪರವಾಗಿ ವೇಗದ ಬೌಲರ್ ಗಳಾದ ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
170 ರನ್ ಗುರಿಯನ್ನು ಬೆನ್ನಟ್ಟಿದ ಟೈಟಾನ್ಸ್ ಆರಂಭಿಕ ಆಘಾತ ಅನುಭವಿಸಿತು, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಹಾ (12) ರನ್ , ನಾಯಕ ಹಾರ್ದಿಕ್ ಪಾಂಡ್ಯ (8), ಸ್ಪೋಟಕ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ (4) ಹಾಗೂ ತೆವಾಟಿಯಾ (3) ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು.
ಆರಂಭಿಕ ಆಟಗಾರ ಗಿಲ್ (42), ರಸೂನ್ ಶುನಕ(17), ವಿಜಯ್ ಶಂಕರ್ (14) ಹಾಗೂ ಆಲ್ ರೌಂಡರ್ ರಶೀದ್ ಖಾನ್ (30) ರನ್ ಗಳಿಸಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ, ಸಿಎಸ್ಕೆ ಪರವಾಗಿ ದೀಪಕ್ ಚಹಾರ್, ರವೀಂದ್ರ ಜಡೇಜಾ, ಮಹೇಶ್ ತೀಕ್ಷ್ಣ ಹಾಗೂ ಪ್ರತಿರಾಣ ತಲಾ ಎರಡು ವಿಕೆಟ್ ಪಡೆದು ಮಿಂಚಿದರು, ಅತ್ಯುತ್ತಮವಾದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮಾಡಿದ ರುತುರಾಜ್ ಗಾಯಕ್ವಾಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.