ದೊಡ್ಡಬಳ್ಳಾಪುರ : ತಾಲೂಕಿನ ದಲಿತರ ಹೋರಾಟಗಾರ, ಮಾದರ ಚೆನ್ನಯ್ಯ ಮಹಾಸಭಾ ಹಿರಿಯ ಕೋರ್ ಕಮಿಟಿ ಸದಸ್ಯರಾದ ಶಿರವಾರದ ಟಿ.ವೀರಸ್ವಾಮಿ ಇಂದು ಮುಂಜಾನೆ ನಿಧನರಾಗಿದ್ದು, ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದಲಿತ ಚಳುವಳಿಯ ಭದ್ರ ಬುನಾದಿ ಹಾಕಿಕೊಟ್ಟ, ನಿಸ್ವಾರ್ಥ ಹೋರಾಟಗಾರರೆಂದೇ ಹೆಸರು ಮಾಡಿದವರು ಟಿ.ವೀರಸ್ವಾಮಿ, ರಾಜ್ಯದಲ್ಲಿ ದಲಿತ ಚಳುವಳಿಯ ಪ್ರಾರಂಭವಾದಾಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದಲಿತರ ಮುಖಂಡರಾಗಿ ಗುರುತಿಸಿಕೊಂಡಿದ್ದರು, ದಲಿತರ ಕೊಲೆಯಾದಾಗ, ದೌರ್ಜನ್ಯವಾದಾಗ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಮೃತರ ನಿಧನಕ್ಕೆ ತಾಲೂಕಿನ ದಲಿತರ ಸಮುದಾಯದ ಮುಖಂಡರಾದ ಆದಿತ್ಯ ನಾಗೇಶ್ , ಟಿ.ಡಿ.ಮುನಿಯಪ್ಪ, ರಾಜಘಟ್ಟ ನಾರಾಯಣಸ್ವಾಮಿ, ಆರ್.ವಿ.ಮಹೇಶ್ ಕುಮಾರ್, ಅಂಜನಮೂರ್ತಿ, ರಾಮಕೃಷ್ಣಪ್ಪ, ಹಳೆಕೋಟೆ ಹನುಮಂತಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…
ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…
ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು. ಬಂಗಾಳ…
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…