ದಟ್ಟ ಅರಣ್ಯದಲ್ಲಿ ಪತ್ನಿಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿ ಪರಾರಿಯಾದ ಪಾಪಿ ಗಂಡ: ಸುಮಾರು 40ದಿನಗಳಿಂದ ಊಟ ನೀರಿಲ್ಲದೆ ವನವಾಸ ಅನುಭವಿಸಿದ 50 ವರ್ಷದ ಮಹಿಳೆ

ಪತಿ ತನ್ನ ಪತ್ನಿಯನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು‌ ಹೋಗಿ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಹೀಗೆ ಸುಮಾರು 40 ದಿನಗಳ ಕಾಲ ನೀರು, ಆಹಾರವಿಲ್ಲದೆ ಕಾಡಿನಲ್ಲಿ‌ ಒಂಟಿಯಾಗಿ ಬಂಧಿಸಲ್ಪಟ್ಟಿದ್ದಾಳೆ.‌

ಮುಂಬೈನಿಂದ 540 ಕಿ.ಮೀ ದೂರದಲ್ಲಿರುವ ಸಿಂಧುದುರ್ಗ ಅರಣ್ಯ ಪ್ರದೇಶದಲ್ಲಿ ಅಮೆರಿಕದ ಮಹಿಳೆ ಲಿಲಿತಾ ಕಾಯಿ (50), ಗಂಡನಿಂದ ಬಂಧಿಸಲ್ಪಟ್ಟ ಮಹಿಳೆ. ಅದೃಷ್ಟವಶಾತ್ ಸಿಂಧುದುರ್ಗದ ಸಾವಂತವಾಡಿ ತಾಲೂಕಿನ ಸ್ಥಳೀಯರೊಬ್ಬರು ಶನಿವಾರ ತಮ್ಮ ಕುರಿ ಮತ್ತು ಹಸುಗಳನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಆಗ ಅಲ್ಲಿ ಆತಂಕಕಾರಿ ದೃಶ್ಯ ಕಂಡು ಭಯಭೀತರಾಗಿದ್ದಾರೆ.

ಆತಂಕಕಾರಿ ದೃಶ್ಯ ಏನಂದರೆ ಮಧ್ಯವಯಸ್ಸಿನ ಮಹಿಳೆಯೊಬ್ಬರು ಕಬ್ಬಿಣದ ಸಂಕೋಲೆಯಿಂದ ಮರಕ್ಕೆ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಇದನ್ನು ಕಂಡು ಗಾಬರಿಗೊಂಡ ವ್ಯಕ್ತಿ ತಕ್ಷಣ ಬಂದಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ರಕ್ಷಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಪೊಲೀಸರು ಆಕೆಯಿಂದ ಅಮೆರಿಕದ ಪಾಸ್‌ಪೋರ್ಟ್ ಮತ್ತು ತಮಿಳುನಾಡು ವಿಳಾಸವಿರುವ ಆಧಾರ್ ಕಾರ್ಡ್ ಪತ್ತೆ ಮಾಡಿ ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಲಲಿತಾ ಕಯಿ ಎಂಬ 50 ವರ್ಷದ ಯುನೈಟೆಡ್ ಸ್ಟೇಟ್ಸ್ ಪ್ರಜೆಯಾಗಿದ್ದು, ತಮಿಳುನಾಡಿನ ವ್ಯಕ್ತಿಯನ್ನು ಮದುವೆಯಾಗಿರುವುದಾಗಿ ಹೇಳಿಕೊಂಡ ಮಹಿಳೆ ಸುಮಾರು ಒಂದು ದಶಕದಿಂದ ಭಾರತದಲ್ಲಿ ವಾಸಿಸುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅವಳ ಬ್ಯಾಗ್ ಅವಳ ಬಳಿ ಇತ್ತು ಮತ್ತು ಅದರಲ್ಲಿ ಅವಳ ಯುಎಸ್ ಪಾಸ್‌ಪೋರ್ಟ್ ಮತ್ತು ಅವಳ ಆಧಾರ್ ಕಾರ್ಡ್‌ನ ಫೋಟೋಕಾಪಿಯಂತಹ ಎಲ್ಲಾ ವೈಯಕ್ತಿಕ ಗುರುತಿನ ದಾಖಲೆಗಳಿವೆ” ಎಂದು ತನಿಖಾ ತಂಡದ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇದು ರೈನ್‌ಕೋಟ್ ಮತ್ತು ಆಹಾರ ಪದಾರ್ಥಗಳನ್ನು ಸಹ ಒಳಗೊಂಡಿದೆ.”

ಮಹಿಳೆ ಅರಣ್ಯ ಪ್ರದೇಶಕ್ಕೆ ಹೇಗೆ ಬಂದಳು ಮತ್ತು ಆಕೆಯ ಕಾಲನ್ನು ಮರಕ್ಕೆ ಬಿಗಿದು ಬಿಟ್ಟು ಹೋದವರು ಯಾರು ಎಂಬುದನ್ನು ಕಂಡುಹಿಡಿಯಲು ಸಿಂಧುದುರ್ಗ ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ.  ಆಸ್ಪತ್ರೆಯಲ್ಲಿದ್ದಾಗ, ಮಹಿಳೆ ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ನೀಡಿ ಟಿಪ್ಪಣಿ ಬರೆದು, ತನ್ನ ಪತಿ ತನ್ನನ್ನು ಮರಕ್ಕೆ ಸಂಕೋಲೆ ಹಾಕಿದ್ದಾನೆ ಮತ್ತು 40 ದಿನಗಳಿಂದ ಕಾಡಿನಲ್ಲಿ ಆಹಾರ ಮತ್ತು ನೀರಿಲ್ಲದೆ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

“ಅಕೆಯ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ.  ಆದರೆ, ಹಸಿವು ಮತ್ತು ನಿರ್ಜಲೀಕರಣದಿಂದಾಗಿ ಆಕೆ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ ನಾವು ಆಕೆಯ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಹೇಮಚಂದ್ರ ಖೋಪಡೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!