ತಾಲೂಕಿನ ಹಾಡೋನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು.
ಬೆಂಗಳೂರು ಕುಂಬಾರ ಸಮುದಾಯದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ವೆಂಕಟಾಚಲಯ್ಯ ಮಾತನಾಡಿ, ಕುಂಬಾರರ ದೇವರು ಸರ್ವಜ್ಞ ಜಯಂತಿಯನ್ನು ಹಾಡೋನಹಳ್ಳಿ ಗ್ರಾಮದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಈ ಮೂಲಕವಾದರೂ ಸಮಾಜ ಸಂಘಟಿತವಾಲಿ. ಎಲ್ಲರೂ ಕವಿ ಸರ್ವಜ್ಞನ ತತ್ವ ಆದರ್ಶಗಳನ್ನು ಪಾಲಿಸಿದರೆ ಉತ್ತಮವಾಗಿ ಜೀವನ ಸಾಗಿಸಬಹುದು ಎಂದರು.
17ನೇ ಶತಮಾನದಲ್ಲಿಯೇ ಬೀದಿ ಬೀದಿ ಅಲೆಯುತ್ತ ಸಮಸಮಾಜಕ್ಕೆ ದುಡಿದ ಮಹಾನ್ ವ್ಯಕ್ತಿ ಆಗಿದ್ದಾರೆ. ನಮ್ಮ ಸಮಾಜ ಏಳಿಗೆಗೆ ನಾವೆಲ್ಲ ದುಡಿಯುತ್ತಿದ್ದೇನೆ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಈಗಾಗಲೇ ಸಮಾಜದ ಕಲ್ಯಾಣ ಮಂಟಪ ಶ್ರೀ ಕ್ಷೇ ತ್ರ ಘಾಟಿಯಲ್ಲಿ ನಿರ್ಮಾಣವಾಗಿದ್ದು, ಇದನ್ನ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಪ್ಪಯಣ್ಣ ಮಾತನಾಡಿ, ಕುಂಬಾರರ ಸಮುದಾಯ ಅತ್ಯಂತ ಕಷ್ಟದ ಜೀವನ ನಡೆಸುತ್ತಿದೆ. ಈಗೀಗ ಸಮಾಜ ಬೆಳಕಿಗೆ ಬರುತ್ತಿದೆ. ತಾರತಮ್ಯ ಮಾಡದೆ ಸವಲತ್ತು ತಲುಪಿಸಲು ಶ್ರಮಿಸುತ್ತೇನೆ. ಅಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಬಡ್ಡಿ ರಹಿತ ಸಾಲ ಸೌಲಭ್ಯವಿದ್ದು ಸಾಲ ಸದ್ಭಳಕೆಯಿಂದ ಆರ್ಥಿಕವಾಗಿ ಸಬಲರಗಬೇಕೆಂದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜು ಮಾತನಾಡಿ, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು 17ನೇ ಶತಮಾನದಲ್ಲಿಯೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಸರ್ವಜ್ಞ. ಪ್ಲಾಸ್ಟಿಕ್ ಅಬ್ಬರದಿಂದಾಗಿ ಮಣ್ಣಿನ ಮಡಿಕೆಗಳ ಪ್ರಭಾವ ಕುಂಠಿತವಾಗಿದೆ. ಹೀಗಾಗಿ ನಮ್ಮ ಕುಲ ಕಸುಬಿಗೆ ಪ್ರೋತ್ಸಾಹದ ಜತೆಗೆ ಮಾರಾಟ ಮಾಡಲು ಅಗತ್ಯವಾದ ಜಾಗವನ್ನು ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಎಸ್ಎಸ್ಎನ್ ಅಧ್ಯಕ್ಷರಾದ ಮುನೇಗೌಡ, ಘಾಟಿ ಕುಂಬಾರ ಛತ್ರದ ಪದಾಧಿಕಾರಿ ಜಯರಾಮಯ್ಯ, ಮುಖಂಡರಾದ ಸುಬ್ರಮಣಿ, ಚೌಡಪ್ಪ, ನಂಜಪ್ಪ, ಗುಂಡಪ್ಪ ಸೇರಿದಂತೆ ಬಚ್ಚಹಳ್ಳಿ ರಾಜಣ್ಣ, ಕೃಷಮೂತಿ (ಕೋಳಿ), ಚಿನ್ನಪ್ಪ, ರಾಮಾಂಜಿನಿ, ನಾಗರಾಜಪ್ಪ, ಗಂಗಾಧರಪ್ಪ ಮತ್ತಿತರರು ಇದ್ದರು.
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…