ತೆಲಂಗಾಣ ವಿಧಾನಸಭೆಯ ಕಿರಿಯ ಶಾಸಕಿ ರಸ್ತೆ ಅಪಘಾತದಲ್ಲಿ ಸಾವು

ಭಾರತ್ ರಾಷ್ಟ್ರ ಸಮಿತಿಯ ತೆಲಂಗಾಣ ವಿಧಾನಸಭೆಯ ಕಿರಿಯ ಶಾಸಕರಲ್ಲಿ ಒಬ್ಬರಾದ ಲಾಸ್ಯ ನಂದಿತಾ ಅವರು ಪತಂಚೆರು ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಶಾಸಕಿ ಲಾಸ್ಯ ನಂದಿತಾ ಮೃತಪಟ್ಟರೆ, ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.

2015ರಲ್ಲಿ ಕಂಟೋನ್ಮೆಂಟ್ ಬೋರ್ಡ್ ಚುನಾವಣೆಯಲ್ಲಿ 4ನೇ ವಾರ್ಡ್‌ನಿಂದ ಪಾಲಿಕೆ ಸದಸ್ಯೆಯಾಗಿ ಸ್ಪರ್ಧಿಸಿ ಲಾಸ್ಯ ರಾಜಕೀಯ ಪ್ರವೇಶಿಸಿದ್ದರು. ಆಕೆಯ ತಂದೆ ದಿವಂಗತ ಜಿ. ಸಾಯಣ್ಣ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಹಾಲಿ ಶಾಸಕರಾಗಿದ್ದರು ಆದರೆ ಅವರು ಫೆಬ್ರವರಿ 2023 ರಲ್ಲಿ ನಿಧನರಾದರು.

ತನ್ನ ತಂದೆ ನಿಧನ‌ ನಂತರ ಅವರು 2023 ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ಗಣೇಶ್.ಎನ್ ಅವರನ್ನು 17,169 ಮತಗಳಿಂದ ಸೋಲಿಸಿ ಸ್ಥಾನವನ್ನು ಗೆದ್ದು ಶಾಸಕಿಯಾದರು.

ಇನ್ಸ್ ಪೆಕ್ಟರ್ ಪ್ರವೀಣ್ ರೆಡ್ಡಿ ಮಾತನಾಡಿ, ಅಪಘಾತದಲ್ಲಿ ಶಾಸಕಿ ಸಾವನ್ನಪ್ಪಿದ್ದು, ಚಾಲಕ ಗಾಯಗೊಂಡಿದ್ದಾರೆ, ರಸ್ತೆ ಅಪಘಾತದ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಘಟನಾ ಸ್ಥಳದಲ್ಲಿ ಬೇರೆ ಯಾವುದೇ ವಾಹನಗಳು ಸಿಲುಕಿಕೊಂಡಿಲ್ಲ ಎಂದಿದ್ದಾರೆ.

ಮಾರುತಿ ಎಕ್ಸ್‌ಎಲ್ 6 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.  ಅಪಘಾತದ ವಿವರಗಳನ್ನು ಖಚಿತಪಡಿಸಿಕೊಳ್ಳಲು ಚಾಲಕನ ಚೇತರಿಕೆಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ ಎಂದು ಪ್ರವೀಣ್ ರೆಡ್ಡಿ ಹೇಳಿದ್ದಾರೆ.

Leave a Reply

Your email address will not be published. Required fields are marked *