ತೂಬಗೆರೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಜ.12ರಂದು(ಭಾನುವಾರ) ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು ಇಲ್ಲಿವೆ…ಓದಿ…

ದೊಡ್ಡಬಳ್ಳಾಪುರ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ಬರುವ ತೂಬಗೆರೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಜ.12ರ‌ ಭಾನುವಾರದಂದು ಮಾಸಿಕ ನಿರ್ವಹಣಾ ಕಾರ್ಯ ಇರುತ್ತದೆ.

ಈ‌ ಹಿನ್ನೆಲೆ ತೂಬಗೆರೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಜ.12 ರ ಭಾನುವಾರ ಬೆಳ್ಳಿಗೆ 10 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್.ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಲು ಬೆಸ್ಕಾಂ ಕೋರಿದೆ.

ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು

ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯ ಎಸ್.ಎಸ್ ಘಾಟಿ, ನೆಲ್ಲುಗುದಿಗೆ, ಗೆದ್ದಲಪಾಳ್ಯ, ಪಾಲ್ ಪಾಲ್ ದಿನ್ನೆ, ಲಗುಮೇನಹಳ್ಳಿ, ಮಾಕಳಿ, ಗುಂಜೂರು, ಕೆ.ಜೆ ಹಳ್ಳಿ, ಎಮ್.ಜೆ ಹಳ್ಳಿ, ದೊಡ್ಡತಿಮ್ಮನಹಳ್ಳಿ, ಚಿಕ್ಕಮುದ್ದೆನಹಳ್ಳಿ, ಕಲ್ಲುಕೋಟೆ, ಮುಕ್ಕಡಿಘಟ್ಟ, ತೂಬಗೆರೆ, ಕಾಚಹಳ್ಳಿ, ದುರ್ಗೆನಹಳ್ಳಿ, ನರಗನಹಳ್ಳಿ, ತಿಮೋಜನಹಳ್ಳಿ, ಲಕ್ಷ್ಮೀದೇವಿಪುರ, ಕಾರ್ನಾಳ, ಟಿ. ಹೊಸಹಳ್ಳಿ, ಸುಣ್ಣಘಟ್ಟಹಳ್ಳಿ, ಸೋತೆನಹಳ್ಳಿ, ಬೀಡಿಗೆರೆ, ಗಂಟಿಗಾನಹಳ್ಳಿ, ಕುರುವೆಗೆರೆ, ಭುಮೆನಹಳ್ಳಿ, ನಾರಸಿಂಹನಹಳ್ಳಿ, ಐಮ್ಮನಹಳ್ಳಿ, ದೊಡ್ಡಮುದ್ದೇನಹಳ್ಳಿ, ತುರುವನಹಳ್ಳಿ, ಮೆಳೆಕೋಟೆ, ದೊಡ್ಡರಾಯಪ್ಪನಹಳ್ಳಿ, ಚಿಕ್ಕರಾಯಪ್ಪನಹಳ್ಳಿ, ಸೊನ್ನಾಪುರ, ಊದನಹಳ್ಳಿ, ಮಾಚಗೊಂಡನಹಳ್ಳಿ, ತಪಸೀಪುರ, ಸೀಗೆಹಳ್ಳಿ, ಹೆಗ್ಗಡಹಳ್ಳಿ, ನಂದಿಬೆಟ್ಟಕ್ರಾಸ್, ಕಣಿವೆಪುರ, ಸೊಣ್ಣಮಾರನಹಳ್ಳಿ, ಡಿ.ಡಿ.ಕೆ ಹಳ್ಳಿ, ವಾಸುದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Leave a Reply

Your email address will not be published. Required fields are marked *