ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಾಗಿ ಆಯ್ಕೆಯಾದ ದೇವನಹಳ್ಳಿಯ ಕೆ.ಸಿ. ಮಂಜುನಾಥ್, ವಿಜಯಪುರದ ಕೆ. ವೆಂಕಟೇಶ್, ತೂಬಗೆರೆಯ ರವಿ ಸಿದ್ದಪ್ಪ ಅವರನ್ನು ಶ್ರೀ ಘಾಟಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಶುಭಾಶಯಗಳನ್ನು ಕೋರುತ್ತಾ, ಅಭಿನಂದಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ, ನನಗೆ ಈ ಅವಕಾಶ ನೀಡಿದಂತ ಎಲ್ಲರಿಗೂ ಧನ್ಯವಾದಗಳು. ಹೋಬಳಿಯಲ್ಲಿ ಪಕ್ಷವನ್ನು ಸದೃಢ ಮಾಡಲು ಕಾಯಾ ವಾಚ ಮನಸ ಕೆಲಸ ಮಾಡುತ್ತೇನೆ. ತಳ(ಬೂತ್)ಮಟ್ಟದಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗುವುದು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತರುವಲ್ಲಿ ಸಕ್ರಿಯರಾಗುತ್ತೇವೆ ಎಂದರು.
ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಕೆಪಿಸಿಸಿ ವಕ್ತಾರ ಲಕ್ಷ್ಮೀಪತಿ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಆರ್.ವಿ.ಮಹೇಶ್, ಮುನಿರಾಜು ಎಸ್.ಡಿ ವಕೀಲರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ನರಸಿಂಹಮೂರ್ತಿ ತೂಬಗೆರೆ ಯೂತ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೇರಿದಂತೆ ಇತರರು ಇದ್ದರು.