ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಗಳಾದ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವಿವಿಧ ಕಾಮಗಾರಿಗಳಿಗೆ ಅಂತುಇಂತು ಚಾಲನೆ ದೊರಕಿತು.
ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಗೆ ಹಸಿರು ನಿಶಾನೆ
ತೂಬಗೆರೆಯಿಂದ ದೊಡ್ಡಬಳ್ಳಾಪುರ ನಗರ, ಬೆಂಗಳೂರಿಗೆ ಪ್ರತಿನಿತ್ಯ ನೂರಾರು ಮಂದಿ ಓಡಾಡುತ್ತಾರೆ. ಸೂಕ್ತ ಸಮಯಕ್ಕೆ ಸಾರಿಗೆ ಬಸ್ ಸೌಲಭ್ಯ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಹಿನ್ನೆಲೆ ಇತ್ತೀಚೆಗೆ ಬಿಎಂಟಿಸಿ ಬಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಇಂದು ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಗೆ ಹಸಿರು ನಿಶಾನೆ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಲಾಯಿತು.
ತೂಬಗೆರೆ, ಹಾಡೋನಹಳ್ಳಿ, ಕಂಟನಕುಂಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ನಗರಕ್ಕೆ ಬಸ್ ಸೇವೆ ಇರುತ್ತದೆ.
10 ಐಮಾಸ್ಟ್ ದೀಪಗಳಿಗೆ ಚಾಲನೆ:
ತೂಬಗೆರೆಯ ಹೋಳಿಯ ಪ್ರಮುಖ ರಸ್ತೆ, ಬಸ್ ನಿಲ್ದಾಣಗಳಲ್ಲಿ ಜಿ.ಪಂ ವತಿಯಿಂದ ಹತ್ತು ಲಕ್ಷ ವೆಚ್ಚದ 10 ಐಮಾಸ್ಟ್ ದೀಪಗಳಿಗೆ ಚಾಲನೆ ದೊರಕಿತು.
ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಕುಡಿಯುವ ನೀರಿಗೆ ತೂಬಗೆರೆ ಹೋಬಳಿಯಲ್ಲಿ ಸಾಕಷ್ಟು ದೂರಗಳು ಕೇಳಿಬಂದ ಹಿನ್ನಲೆಯಲ್ಲಿ ಸಚಿವರ ಅನುಮತಿ ಮೇರೆಗೆ ಖಾಸಗಿ ಸಹಭಾಗಿತ್ವದಲ್ಲಿ ಕುಡಿಯುವ ನೀರಿನ ಘಟಕವಾದ ಆರ.ಓ ಪ್ಲಾಂಟ್ ಗೆ ಚಾಲನೆ ನೀಡಲಾಯಿತು.
ಈ ವೇಳೆ ಕೆಪಿಸಿಸಿ ಸದಸ್ಯ ಮುನಿರಾಜು ಮಾತನಾಡಿ, ಹೋಬಳಿಯ ಜನರಿಗೆ ಅನುಕೂಲವಾಗುವಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿಲಾಗಿದೆ. ಸಚಿವರು ಬಸ್ ಸೇವೆ ಒದಗಿಸುವ ಮೂಲಕ ಬುಹುದಿನಗಳಿಂದ ಬೇಡಿಕೆಯಿದ್ದ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತುಕೊಳ್ಳುವ ಮೂಲಕ ಹೋಬಳಿಯ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ ಮಾತನಾಡಿ, ಸಚಿವರು ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಸ್ಥಳೀಯ ಜನ ಪ್ರತಿನಿಧಿಗಳ ಸಭೆ ನಡೆಸುವ ಮೂಲಕ ಆಲಿಸಿದ್ದು. ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಅದರಂತೆಯೇ ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.
ಈ ವೇಳೆ ಜಿ.ಪಂ ಮಾಜಿ ಸದಸ್ಯ ಎನ್, ಅರವಿಂದ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಸಿದ್ದಪ್ಪ, ಗ್ರಾ.ಪಂ ಸದಸ್ಯರಾದ ಟಿ.ವಿವೆಂಕಟೇಶ್, ಮುನಿಕೃಷ್ಣಪ್ಪ. ಕಾಂಗ್ರೆಸ್ ಮುಖಂಡರಾದ ಅಂಜಿಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.