ತಾಲೂಕಿನ ತೂಬಗೆರೆ ಹೋಬಳಿಯಾದ್ಯಂತ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ರಾತ್ರಿ ಸುರಿದ ಮಳೆಗೆ 16 ವಿದ್ಯುತ್ ಕಂಬಗಳು, 80ಕ್ಕೂ ಹೆಚ್ಚು ಮರಗಳು ಧರಗೆ ಉರುಳಿವೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಇಡೀ ರಾತ್ರಿ ಕತ್ತಲೆಯಲ್ಲಿ ಕಾಲಕಳೆದ ತೂಬಗೆರೆ ಹೋಬಳಿ.
ಬೆಳಗ್ಗೆಯಿಂದಲೂ ಬೆಸ್ಕಾಂ ಸಿಬ್ಬಂದಿ ಹಾನಿಗೊಳಗಾದ ಕಂಬಗಳನ್ನು ಸರಿಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ತಾಲೂಕು ಆಡಳಿತ ಇನ್ನೂ ತಲೆ ಕೆಡಿಸಿಕೊಂಡಿಲ್ಲ. ತಹಶಿಲ್ದಾರ್, ತಾ.ಪಂ ಇಓ ಯಾರೂ ಕೂಡ ಭೇಟಿ ನೀಡಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.