ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಅಂತರ್ ವಿಭಾಗದ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಆಗ್ಯಾ೯ನಿಕ್ ಕೆಮಿಸ್ಟ್ರಿ ತಂಡದ ವಿರುದ್ಧ ಗೆಲ್ಲುವ ಮೂಲಕ ರಾಜ್ಯಶಾಸ್ತ್ರ ವಿಭಾಗವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಮೂರು ಸೆಟ್‌ಗಳ ಪಂದ್ಯದಲ್ಲಿ ಎರಡು ಸೆಟ್ ನಲ್ಲಿ ಗೆಲ್ಲುವ ಮೂಲಕ ಪುನೀತ್ ನಾಯಕತ್ವದ ರಾಜ್ಯಶಾಸ್ತ್ರ ವಿಭಾಗವು ಪ್ರಬಲ ಪೈಪೋಟಿ ನೀಡಿದ ಆಗ್ಯಾ೯ನಿಕ್ ಕೆಮಿಸ್ಟ್ರಿ ವಿರುದ್ಧ ಜಯಗಳಿಸಿತು.
ಮಾರುತಿ, ಗಂಗಾಧರ್, ದೀಪಕ್, ರಂಗನಾಥ್, ಕೀರ್ತಿ ಕುಮಾರ್ ಉತ್ತಮ ಸವ್೯ ಹಾಗೂ ಸ್ಮಾಷ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಭಾಗದ ಮುಖ್ಯಸ್ಥರಾದ ಬಸವರಾಜು, ಸಹಾಯಕ ಪ್ರಾಧ್ಯಾಪಕರಾದ ಮಹಾಲಿಂಗ ಕೆ, ರಾಮಕೃಷ್ಣ ವಾಲ್ಮೀಕಿ, ಸಂಶೋಧನಾಥಿ೯ಗಳಾದ ಮಂಜುನಾಥ್, ಧರ್ಮಣ್ಣ, ಭೀಮಷಿ ಆಟಗಾರರನ್ನು ಅಭಿನಂದಿಸಿದರು.