ದೊಡ್ಡಬಳ್ಳಾಪುರ: ನೈರುತ್ಯ ರೈಲ್ವೆ ವ್ಯಾಪ್ತಿಯ ವಡ್ಡರಹಳ್ಳಿ ಹಾಗೂ ಮಾಕಳಿ ದುರ್ಗ ರೈಲು ನಿಲ್ದಾಣಗಳ ನಡುವಿನ ತಿರುಮಗೊಂಡನಹಳ್ಳಿ ಕ್ರಾಸಿಂಗ್ ಬಳಿ ಹಳಿಗಳ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ನ.28ರಿಂದ ಡಿ.3ರವರೆಗೆ ಸಂಜೆ 10ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ರೈಲ್ವೆ ಗೇಟ್ ಬಳಿಯ ಹಳಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವ ಕಾರಣ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ವಾಹನ ಸವಾರರು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ರವರೆಗೆ ಗೊಲ್ಲಹಳ್ಳಿ, ಪೆರಮಗೊಂಡನಹಳ್ಳಿ ಮೂಲಕ ಹಾಡೋನಹಳ್ಳಿಗೆ ತೆರಳಿ ಮುಂದಕ್ಕೆ ಸಾಗಬೇಕಾಗಿದೆ.