ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘ ಬಿಜೆಪಿ- ಜೆಡಿಎಸ್ ತೆಕ್ಕೆಗೆ

ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆಯುವ ಮೂಲಕ ಸಂಘದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ, 13 ನಿರ್ದೇಶಕರುಗಳ ಸ್ಥಾನಗಳಲ್ಲಿ 8 ಸ್ಥಾನ ಪಡೆದ ಮೈತ್ರಿಕೂಟ ಅಧಿಕಾರವನ್ನ ಹಿಡಿದಿದೆ.

ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತಕ್ಕೆ ಭಾನುವಾರದಂದ್ದು ಚುನಾವಣೆ ನಡೆದಿದ್ದು, 13 ಸ್ಥಾನಗಳ ನಿರ್ದೇಶಕರ ಮಂಡಳಿಯಲ್ಲಿ ಪರಿಶಿಷ್ಟ ಜಾತಿ ಕೋಟದಲ್ಲಿ ಸ್ಪರ್ಧಿಸಿದ ಶಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೈತ್ರಿಯೊಂದಿಗೆ ಸ್ಪರ್ಧಿಸಿದ್ದರು.

13 ಸ್ಥಾನಗಳ ನಿರ್ದೇಶಕರ ಮಂಡಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳನ್ನ ಪಡೆದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಡಳಿತ ಮಂಡಳಿಯ ಅಧಿಕಾರ ಹಿಡಿದರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟರು. ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾಗಿ ಕೆ.ವಿ.ಮಾಧವರೆಡ್ಡಿ ಕಾರ್ಯ ನಿರ್ವಹಿಸಿದ್ದರು.

ಪರಿಶಿಷ್ಟ ಜಾತಿ ಕೋಟದಲ್ಲಿ ಸ್ಪರ್ಧಿಸಿದ ಶಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 12 ಸ್ಥಾನಗಳಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ  ರಾಜಣ್ಣ.ಟಿ, ಟಿ.ಆರ್.ನಟರಾಜ್, ಅಶೋಕ್, ಅಂಬರೀಶ್, ಲೋಕೇಶ್, ಟಿ.ಡಿ.ಆನಂದ್, ಕೃಷ್ಣಮೂರ್ತಿ, ಮಹಿಳಾ ಮೀಸಲು ಸ್ಥಾನದಲ್ಲಿ ಅನಸೂಯಮ್ಮ, ರತ್ನಮ್ಮ, ಹಿಂದುಳಿದ ವರ್ಗ ಎ ಸ್ಥಾನದಲ್ಲಿ ಕುಮಾರ್ ಎಂ, ಹಿಂದುಳಿದ ವರ್ಗ ಬಿ ಸ್ಥಾನದಲ್ಲಿ ಪಿ.ರಾಜಣ್ಣ, ಪರಿಶಿಷ್ಟ ಪಂಗಡ ಕೋಟಾದಲ್ಲಿ ಗಂಗಾಧರ್ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ವಿಚೇತರಾದ ನಿರ್ದೇಶಕರನ್ನ ಅಭಿನಂದಿಸಲಾಗಿತು, ಈ ವೇಳೆ ತಿಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನ್ನರಾಮಯ್ಯ, ಗ್ರಾಮ ಪಂಚಾಯತ್ ಸದಸ್ಯರಾದ ನರಸಿಂಹಯ್ಯ, ಹನುಮಂತಪ್ಪ, ಮಾಜಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಟಿ.ಡಿ.ಮುನಿಯಪ್ಪ, ಮಾಜಿ ಗ್ರಾಮ ಪಂಚಯತ್ ಸದ್ಯಸರಾದ ಸಂತೋಷ್. ಬಿಜೆಪಿ ಮುಖಂಡರಾದ ಸೂರ್ಯನಾರಾಯಣಗೌಡ, ಗ್ರಾಮದ ಮುಖಂಡರಾದ ಸಿದ್ದಪ್ಪ, ಅರೇಹನುಮಯ್ಯ, ನರೇಂದ್ರ, ಖುಷ್ ಕುಮಾರ್ ಇದ್ದರು.

Leave a Reply

Your email address will not be published. Required fields are marked *