ತಿಗಳ ಸಮುದಾಯದ ಎಲ್.ಎ.ಮಂಜುನಾಥ್ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಭೇಟಿ, ಚರ್ಚೆ

ಕೋಲಾರ: ಮೀಸಲು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ ಗೌತಮ್ ಅವರು ಶನಿವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ತಿಗಳ ಸಮುದಾಯದ ಪ್ರಭಾವಿ ಮುಖಂಡ ಎಲ್.ಎ ಮಂಜುನಾಥ್ ಮನೆಗೆ ಭೇಟಿ ನೀಡಿ ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ತಿಗಳ ಸಮುದಾಯದ ಮುಖಂಡರು ಮಾತನಾಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1.30 ಲಕ್ಷದಷ್ಟು ಮತದಾರರು ಇದ್ದರೂ ಸಹ ರಾಜಕೀಯವಾಗಿ ಯಾವುದೇ ಸ್ಥಾನಮಾನಗಳನ್ನು ನೀಡುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ತೋರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುತ್ತೇವೆ. ಆದರೆ, ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ರಾಜಕೀಯ ಸ್ಥಾನಮಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಲ್.ಎ ಮಂಜುನಾಥ್ ಮಾತನಾಡಿ, 2023 ರಲ್ಲಿ ಕೋಲಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಹೇಳಿದ್ದರು ಅದರಂತೆ ನಾನು ಸಹ ಕ್ಷೇತ್ರದಲ್ಲಿ ಕೆಲಸವನ್ನು ಮಾಡಿದ್ದೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಸ್ಪರ್ಧೆ ಅಂತ ಹೇಳಿ ಕೊನೆ ಕ್ಷಣದಲ್ಲಿ ಅವರು ಸ್ಪರ್ಧೆ ಮಾಡಲಿಲ್ಲ. ನನಗೂ ಕೂಡ ಅವಕಾಶ ವಂಚಿತರಾಗಿ ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಜನಾಂಗ ಪ್ರತಿನಿಧಿಯಾಗಿ ಇದ್ದ ಒಬ್ಬರೇ ಒಬ್ಬ ಎಂಎಲ್ಸಿಯನ್ನು ಸಹ ಕಿತ್ತುಕೊಂಡಿದ್ದಾರೆ ಅದಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಸರಕಾರ ಮತ್ತು ಪಕ್ಷದೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದರು

ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಮಾತನಾಡಿ, ಅನಿವಾರ್ಯ ಕಾರಣದಿಂದ ಹೈಕಮಾಂಡ್ ಕಾಂಗ್ರೆಸ್ ಟಿಕೆಟ್ ನನ್ನಂತಹ ನಿಷ್ಠಾವಂತ ಸಾಮಾನ್ಯ ವ್ಯಕ್ತಿಗೆ ನೀಡಿದೆ. ಯಾವುದೇ ಸಮುದಾಯವನ್ನು ಗುರುತಿಸಿಕೊಳ್ಳಲು ಒಗ್ಗಟ್ಟಿನಿಂದ ಗಟ್ಟಿ ದ್ವನಿಯಾಗಬೇಕು. ಪಕ್ಷವು ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಿ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದು, ನಿಮ್ಮ ಮನೆ ಮಗನ ರೀತಿಯಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಬೆನೊಟೊ, ತಿಗಳ ಸಮುದಾಯದ ಮುಖಂಡರಾದ ಫಾಲ್ಗುಣ, ಆನಂದಕುಮಾರ್, ರಾಮಮೂರ್ತಿ, ರಂಗನಾಥ್, ನಾಗರಾಜ್, ಸುಭಾಕರ್, ಚಿನ್ನಪ್ಪ,ಬಾಬು, ಮುನೇಂದ್ರ, ಮಂಜುನಾಥ್, ರಾಜೇಂದ್ರ ಪ್ರಸಾದ್, ಮುನಿರಾಜು, ರಘು, ಶ್ರೀನಿವಾಸ್, ಗೋಪಾಲ್, ಜಯರಾಮ್, ಶ್ರೀರಾಮ್, ಮೂರ್ತಿ, ಮುಂತಾದವರು ಇದ್ದರು

Leave a Reply

Your email address will not be published. Required fields are marked *