ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ವ್ಯಾಪ್ತಿ ಪ್ರಕಟ: ಆಕ್ಷೇಪಣೆ ಆಹ್ವಾನ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 72 ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ 25 ಜಿಲ್ಲಾ ಪಂಚಾಯತಿ  ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿದೆ‌.

ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ,ಗಡಿಗಳ ಕುರಿತ ವಿವರಗಳನ್ನು ಆಯೋಗದ ವೆಬ್‌ಸೈಟ್ rdpr.Karnataka.gov.in/rdc/public ನಲ್ಲಿ ಪ್ರಕಟಿಸಲಾಗಿದೆ.

ತಾ.ಪಂಸದಸ್ಯರ ಸಂಖ್ಯೆ: ನೆಲಮಂಗಲ-15,
ದೇವನಹಳ್ಳಿ-15, ದೊಡ್ಡಬಳ್ಳಾಪುರ-20,ಹೊಸಕೋಟೆ-22 , ಒಟ್ಟು-72

ಜಿ.ಪಂ.ಸದಸ್ಯರ ಸಂಖ್ಯೆ: ನೆಲಮಂಗಲ-5 ,ದೇವನಹಳ್ಳಿ-5,ದೊಡ್ಡಬಳ್ಳಾಪುರ-7,
ಹೊಸಕೋಟೆ-8 ,ಒಟ್ಟು-25

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ  ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ
ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ, ಈ  ಪ್ರಕಟಣೆಯ ದಿನಾಂಕದಿಂದ 15
ದಿವಸಗಳು ಅಂದರೆ ಜನವರಿ 16   ಸೋಮವಾರ ಸಂಜೆ 5 ಗಂಟೆಯ ಒಳಗಾಗಿ  ಸಲ್ಲಿಸಬಹುದು.

ಆಕ್ಷೇಪಣೆಗಳನ್ನು ವೆಬ್ ಸೈಟ್ ವಿಳಾಸ: “https://rdpr.karnataka.gov.in/rdc/public/” ಸದರಿ ವೆಬ್‌ಸೈಟ್‌ನ ಮುಖಪುಟದ
ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು” ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು  ಸಲ್ಲಿಸಬಹುದು.

ಖುದ್ದಾಗಿ ಇಲ್ಲವೆ ಅಂಚೆ  ಮೂಲಕ ಸಲ್ಲಿಸಬಯಸುವವರು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,
ಅಂಬೇಡ್ಕರ್ ವೀಧಿ, ಬೆಂಗಳೂರು-560001
ವಿಳಾಸಕ್ಕೆ ಸಲ್ಲಿಸಬಹುದು.

ನಿಗದಿತ ದಿನಾಂಕದ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್.ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *