2023-24ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.21, 22 ರಂದು ಏಕಕಾಲದಲ್ಲಿ ನಡೆಸಲಾಗುತ್ತಿದ್ದು, ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಮಾತ್ರ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಆಯೋಜಿಸಲಾಗುವ ಕ್ರೀಡೆಗಳ ವಿವರ
ಅಥ್ಲೆಟಿಕ್ಸ್ – ಪುರುಷ ಮತ್ತು ಮಹಿಳೆಯರಿಗೆ
ವಾಲಿಬಾಲ್ – ಪುರುಷ ಮತ್ತು ಮಹಿಳೆಯರಿಗೆ
ಫುಟ್ಬಾಲ್ – ಪುರುಷರಿಗೆ,
ಖೋ ಖೋ – ಪುರುಷ ಮತ್ತು ಮಹಿಳೆಯರಿಗೆ,
ಕಬಡ್ಡಿ – ಪುರುಷ ಮತ್ತು ಮಹಿಳೆಯರಿಗೆ,
ಥ್ರೋಬಾಲ್ – ಪುರುಷ ಮತ್ತು ಮಹಿಳೆಯರಿಗೆ,
ಯೋಗ – ಪುರುಷ ಮತ್ತು ಮಹಿಳೆಯರಿಗೆ
ಬ್ಯಾಸ್ಕೆಟ್‌ಬಾಲ್ – ಪುರುಷ ಮತ್ತು ಮಹಿಳೆಯರಿಗೆ,
ಹಾಕಿ – ಪುರುಷ ಮತ್ತು ಮಹಿಳೆಯರಿಗೆ,
ಹ್ಯಾಂಡ್‌ಬಾಲ್ – ಪುರುಷ ಮತ್ತು ಮಹಿಳೆಯರಿಗೆ,
ಟೇಬಲ್ ಟೆನ್ನಿಸ್ – ಪುರುಷ ಮತ್ತು ಮಹಿಳೆಯರಿಗೆ,
ಬಾಲ್ ಬ್ಯಾಡ್ಮಿಂಟನ್ – ಪುರುಷ ಮತ್ತು ಮಹಿಳೆಯರಿಗೆ, ಕುಸ್ತಿ – ಪುರುಷ ಮತ್ತು ಮಹಿಳೆಯರಿಗೆ
ಷರತ್ತು ಮತ್ತು ನಿಬಂಧನೆಗಳು
ತಾಲ್ಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆ ರಕ್ಷಣಾಪಡೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವಿರುವುದಿಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅಂತಹ ಪ್ರಕರಣವೇನಾದರೂ ದಾಖಲಾದಲ್ಲಿ ಅಥವಾ ಗಮನಕ್ಕೆ ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಒಬ್ಬ ಕ್ರೀಡಾಪಟು 3 ಸ್ಪರ್ಧೆಯಲ್ಲಿ ಮಾತ್ರ (ರಿಲೇ ಸಹಿತ) ಭಾಗವಹಿಸಲು ಅವಕಾಶವಿರುತ್ತದೆ. (ಒಂದು ಟ್ರಾಕ್ ಅಥವಾ 2 ಫೀಲ್ಡ್/ಒಂದು ಫೀಲ್ಡ್ ಅಥವಾ 2 ಟ್ರಾಕ್ ಈವೆಂಟ್‌ಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ)
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.ಅದಕ್ಕೆ ಕ್ರೀಡಾಪಟುಗಳು ಬದ್ಧರಾಗಿರುವುದು. ತೀರ್ಪುಗಾರರ ತೀರ್ಮಾನದ ವಿರುದ್ಧ ಯಾವುದೇ ಕ್ರೀಡಾಪಟುಗಳು ಅಶಿಸ್ತಿನಿಂದ ವರ್ತಿಸಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.
ಕ್ರೀಡಾಕೂಟದ ಸಮಯದಲ್ಲಿ ಕ್ರೀಡಾಪಟುಗಳು ಶಿಸ್ತಿನಿಂದ ವರ್ತಿಸುವುದು.ಯಾವುದೇ ಕ್ರೀಡಾಪಟು ಅಶಿಸ್ತಿನಿಂದ ಅಥವಾ ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.
ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿರಬೇಕು, ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಸಂದರ್ಭದಲ್ಲಿ ಸ್ಥಳೀಯ ತಾಲ್ಲೂಕಿನ ಆಧಾರ್ ಕಾರ್ಡ್ ಅನ್ನು ಹಾಜರು ಪಡಿಸಬೇಕು ಹಾಗೂ ವಿದ್ಯಾರ್ಥಿಯಾಗಿದ್ದಲ್ಲಿ ಶಾಲಾ/ ಕಾಲೇಜು ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ
1.ಸುನಿಲ್‌ನಾಯ್ಕ ದೈಹಿಕ ಶಿಕ್ಷಣ ಪರಿವೀಕ್ಷಕರು, ದೊಡ್ಡಬಳ್ಳಾಪುರ ತಾಲ್ಲೂಕು 9449375395,
2.ವೆಂಕಟೇಶ್.ಟಿ ದೈಹಿಕ ಶಿಕ್ಷಣ ಪರಿವೀಕ್ಷಕರು, ದೇವನಹಳ್ಳಿ ತಾಲ್ಲೂಕು 9740182577,
3.ರವಿಕುಮಾರ್ 3.ದೈಹಿಕ ಶಿಕ್ಷಣ ಪರಿವೀಕ್ಷಕರು, ನೆಲಮಂಗಲ ತಾಲ್ಲೂಕು 9880781906,
4.ಜಗದೀಶ್ ದೈಹಿಕ ಶಿಕ್ಷಣ ಪರಿವೀಕ್ಷಕರು, ಹೊಸಕೋಟೆ ತಾಲ್ಲೂಕು 9141125857 ಸಂಪರ್ಕಿಸಬಹುದು ಎಂದು
ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.