ತಾಲ್ಲೂಕಿನಲ್ಲಿ ಮಿತಿಮೀರಿದ ಭೂಗಳ್ಳರ ಹಾವಳಿ: ಭೂಗಳ್ಳರ ಹಾವಳಿಗೆ ನಲುಗುತ್ತಿರುವ ಬಡ, ರೈತ ಕುಟುಂಬಗಳು

ಗೋಮಾಳ ಸೇರಿದಂತೆ ಸರ್ಕಾರಿ ರಸ್ತೆ, ಹಳ್ಳ-ಕೊಳ್ಳ ಒತ್ತುವರಿ ಮಾಡುತ್ತಿದ್ದ ಭೂಗಳ್ಳರ ಕಾಕದೃಷ್ಟಿ ಈಗ ಅಶಕ್ತ ಕುಟುಂಬಗಳ ಜಮೀನಿನ ಮೇಲೆ ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬಲಾಢ್ಯರು, ಭೂಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಬಡವರ‌ ಜಮೀನು ಕಬಳಿಸುತ್ತಿದ್ದಾರೆ.

ಪೊಲೀಸ್ ಇಲಾಖೆ, ನ್ಯಾಯಾಲಯದ ಮೆಟ್ಟಿಲೇರಿದರೂ ಬಡವರಿಗೆ ನ್ಯಾಯ‌ ಮರೀಚಿಕೆಯಾಗಿದೆ.‌

ತಾಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಣಿವೆಪುರದಲ್ಲಿ‌ ಸುಮಾರು 50 ವರ್ಷಗಳಿಂದ ಅನುಭವದಲ್ಲಿದ್ದ ಕೃಷ್ಣಪ್ಪ ಅವರು, 30 ವರ್ಷಗಳ ಹಿಂದೆ ಕಿಮ್ಮತ್ತು ಕಟ್ಟಿ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಈಗ ಭೂಗಳ್ಳರ ಕಾಟದಿಂದ ಇಡೀ ಕುಟುಂಬ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದೆ.

ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದರೂ ಭೂಗಳ್ಳರು ವಾಮಾಮಾರ್ಗದಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕು ಎಂದು ಜಮೀನಿನ ಮಾಲೀಕರಾದ ಗಾಯತ್ರಿಮ್ಮ ಮನವಿ ಮಾಡಿಕೊಂಡರು.

ಏನಿದು ವಿವಾದ?
ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿರುವ ಒಟ್ಟು 9.17 ಗುಂಟೆ ಜಮೀನಿಗೆ ಸಂಬಂಧಿಸಿ ನರಸಪ್ಪನವರ ಮಗನಾದ ಕೃಷ್ಣಪ್ಪ ಅವರಿಗೆ 1994ರಲ್ಲಿ ಆರ್. ಎಲ್. ಜಾಲಪ್ಪ ಅಧ್ಯಕ್ಷತೆಯ ಭೂ ಮಂಜೂರಾತಿ ಸಲಹಾ ಸಮಿತಿ ಷರತ್ತುಗಳನ್ನು ಒಳಗೊಂಡ ಹಕ್ಕುಪತ್ರ, ಕಿಮ್ಮತ್ ಕಟ್ಟಿಸಿಕೊಂಡು 2.10 ಎಕರೆ ಮಂಜೂರು ಮಾಡಲಾಗಿತ್ತು.

ಅಂದಿನ ಭೂ‌ಮಂಜೂರಾತಿ ಸಲಹಾ ಸಮಿತಿಯಲ್ಲಿ ಟಿ .ಕೆಂಪಹನುಮಯ್ಯ, ಲಕ್ಷ್ಮಿದೇವಮ್ಮ, ಕೆ. ಸಿ.ಗುರುರಾಜಪ್ಪ ಸದಸ್ಯರಾಗಿದ್ದರು. ಈ ಸಮಿತಿಯ ಆದೇಶದಂತೆ 2.10 ಗುಂಟೆ ಜಮೀನಿನಲ್ಲಿ ಕೃಷ್ಣಪ್ಪ ಬಿನ್ ನರಸಪ್ಪನವರ ಕುಟುಂಬ ವ್ಯವಸಾಯ ಮಾಡುತ್ತಿತ್ತು. ಈ ಮಧ್ಯೆ ಚಿಕ್ಕಬಳ್ಳಾಪುರದ ನಿವಾಸಿಯಾದ ಕೃಷ್ಣಪ್ಪ ಬಿನ್ ಗಿರಿಯಪ್ಪ ಎಂಬುವರು ಆಂಧ್ರ ಮೂಲದ ಕೆಲ ಪ್ರಭಾವಿಗಳ ಬೆಂಬಲದಿಂದ 2006ರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 9.17 ಗುಂಟೆ ಜಮೀನು ಪೈಕಿ 5.10ಗುಂಟೆ ಜಮೀನನ್ನು ಕೃಷ್ಣಪ್ಪ ಸನ್ ಆಫ್ ಗಿರಿಯಪ್ಪ ಅವರ ಹೆಸರಿಗೆ ಎಸಿ ಕಚೇರಿಯಲ್ಲಿ ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಡಿಸಿ ಕಚೇರಿಯಲ್ಲಿ ಆರ್. ಪಿ.ಸಂಖ್ಯೆ 102/2015 16 ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅಡಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ. ಇನ್ನು ಉಳಿಕೆ 3.24 ಎಕರೆ ಜಮೀನನಲ್ಲಿ 2.10ಎಕರೆ ನಮ್ಮ ಹೆಸರಿನಲ್ಲೇ ಇದೆ. ಈಗ ಪಹಣಿಯಲ್ಲಿ ಸರ್ಕಾರಿ ಫಡ ಎಂದು ಹೆಸರಿಸಿ,ಅಧಿಕಾರಿಗಳ ಮೂಲಕ‌ ಕಬಳಿಸಲು ಯತ್ನಿಸುತ್ತಿದ್ದಾರೆ. ಬಾಡಿಗೆ ಗೂಂಡಾಗಳು ಹಾಗೂ ದಲ್ಲಾಳಿಗಳನ್ನು ಕರೆತಂದು ಬೆದರಿಸುತ್ತಿದ್ದಾರೆ ಎಂದು ಗಾಯಿತ್ರಮ್ಮ ಆರೋಪಿಸಿದರು.

ನಮ್ಮದು ಸಾಮಾನ್ಯ ಕುಟುಂಬ. ಈಗಾಗಲೇ ಸಾಕಷ್ಟು ನೊಂದು ಬೆಂದಿದ್ದೇವೆ. ನನ್ನ ಪತಿ ಕೆ.ರಾಜು ಅವರ ಆರೋಗ್ಯ ಸ್ಥಿತಿ ಕೂಡ ಸರಿಯಿಲ್ಲ. ನನ್ನ ನಾದಿನಿ ನ್ಯಾಯಾಲಯದಲ್ಲಿ ಭಾಗಾಂಶದ ದಾವೆ ಹೂಡಿ ತಡೆ ತಂದಿರುವವುದರಿಂದ ಭೂಗಳ್ಳರು ತಂತಿ ಬೇಲಿ ಹಿಂದೂ ಮುಂದೂ ನೋಡುತ್ತಿದ್ದಾರೆ. ಅಧಿಕಾರಿಗಳು ಕೂಡ ಬಲಾಢ್ಯರ ಪರ ನಿಂತು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಚಿಕ್ಕಬಳ್ಳಾಪುರದ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಬಳಿ ಯಾವುದೇ ರೀತಿ ದಾಖಲಾತಿಗಳಿಲ್ಲ. ದಾಖಲಾತಿಗಳಿಲ್ಲದೆ ಅಕ್ರಮವಾಗಿ ನಮ್ಮ ಜಾಗವನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಭೂಮಿ ನಮ್ಮ ಪೂರ್ವಿಕರಿಗೆ ಸೇರಿದ್ದು, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತು ಬಡವರ ಪರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯಲ್ಲಿ ಚಿಕ್ಕಬಳ್ಳಾಪುರದ ನಿವಾಸಿ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಮೇಲೆ ಡಿಕ್ಲರೇಷನ್ ಡಿಡೆಕ್ಷನ್ ಇಂಜೆಕ್ಷನ್ ಆರ್ಡರ್ ಇದೆ. ಪ್ರಸ್ತುತ ವಿಚಾರಣೆ ಹಂತದಲ್ಲಿದೆ. ಆದರೆ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೇ ಭೂಗಳ್ಳರು, ದಲ್ಲಾಳಿಗಳು ನಮ್ಮನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ನಮಗೆ ಪೊಲೀಸರು ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಕೋರಿದರು.

Ramesh Babu

Journalist

Recent Posts

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

9 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

10 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

11 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

15 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

21 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago