ಗೋಮಾಳ ಸೇರಿದಂತೆ ಸರ್ಕಾರಿ ರಸ್ತೆ, ಹಳ್ಳ-ಕೊಳ್ಳ ಒತ್ತುವರಿ ಮಾಡುತ್ತಿದ್ದ ಭೂಗಳ್ಳರ ಕಾಕದೃಷ್ಟಿ ಈಗ ಅಶಕ್ತ ಕುಟುಂಬಗಳ ಜಮೀನಿನ ಮೇಲೆ ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬಲಾಢ್ಯರು, ಭೂಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಬಡವರ ಜಮೀನು ಕಬಳಿಸುತ್ತಿದ್ದಾರೆ.
ಪೊಲೀಸ್ ಇಲಾಖೆ, ನ್ಯಾಯಾಲಯದ ಮೆಟ್ಟಿಲೇರಿದರೂ ಬಡವರಿಗೆ ನ್ಯಾಯ ಮರೀಚಿಕೆಯಾಗಿದೆ.
ತಾಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಣಿವೆಪುರದಲ್ಲಿ ಸುಮಾರು 50 ವರ್ಷಗಳಿಂದ ಅನುಭವದಲ್ಲಿದ್ದ ಕೃಷ್ಣಪ್ಪ ಅವರು, 30 ವರ್ಷಗಳ ಹಿಂದೆ ಕಿಮ್ಮತ್ತು ಕಟ್ಟಿ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಈಗ ಭೂಗಳ್ಳರ ಕಾಟದಿಂದ ಇಡೀ ಕುಟುಂಬ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದರೂ ಭೂಗಳ್ಳರು ವಾಮಾಮಾರ್ಗದಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕು ಎಂದು ಜಮೀನಿನ ಮಾಲೀಕರಾದ ಗಾಯತ್ರಿಮ್ಮ ಮನವಿ ಮಾಡಿಕೊಂಡರು.
ಏನಿದು ವಿವಾದ?
ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿರುವ ಒಟ್ಟು 9.17 ಗುಂಟೆ ಜಮೀನಿಗೆ ಸಂಬಂಧಿಸಿ ನರಸಪ್ಪನವರ ಮಗನಾದ ಕೃಷ್ಣಪ್ಪ ಅವರಿಗೆ 1994ರಲ್ಲಿ ಆರ್. ಎಲ್. ಜಾಲಪ್ಪ ಅಧ್ಯಕ್ಷತೆಯ ಭೂ ಮಂಜೂರಾತಿ ಸಲಹಾ ಸಮಿತಿ ಷರತ್ತುಗಳನ್ನು ಒಳಗೊಂಡ ಹಕ್ಕುಪತ್ರ, ಕಿಮ್ಮತ್ ಕಟ್ಟಿಸಿಕೊಂಡು 2.10 ಎಕರೆ ಮಂಜೂರು ಮಾಡಲಾಗಿತ್ತು.
ಅಂದಿನ ಭೂಮಂಜೂರಾತಿ ಸಲಹಾ ಸಮಿತಿಯಲ್ಲಿ ಟಿ .ಕೆಂಪಹನುಮಯ್ಯ, ಲಕ್ಷ್ಮಿದೇವಮ್ಮ, ಕೆ. ಸಿ.ಗುರುರಾಜಪ್ಪ ಸದಸ್ಯರಾಗಿದ್ದರು. ಈ ಸಮಿತಿಯ ಆದೇಶದಂತೆ 2.10 ಗುಂಟೆ ಜಮೀನಿನಲ್ಲಿ ಕೃಷ್ಣಪ್ಪ ಬಿನ್ ನರಸಪ್ಪನವರ ಕುಟುಂಬ ವ್ಯವಸಾಯ ಮಾಡುತ್ತಿತ್ತು. ಈ ಮಧ್ಯೆ ಚಿಕ್ಕಬಳ್ಳಾಪುರದ ನಿವಾಸಿಯಾದ ಕೃಷ್ಣಪ್ಪ ಬಿನ್ ಗಿರಿಯಪ್ಪ ಎಂಬುವರು ಆಂಧ್ರ ಮೂಲದ ಕೆಲ ಪ್ರಭಾವಿಗಳ ಬೆಂಬಲದಿಂದ 2006ರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 9.17 ಗುಂಟೆ ಜಮೀನು ಪೈಕಿ 5.10ಗುಂಟೆ ಜಮೀನನ್ನು ಕೃಷ್ಣಪ್ಪ ಸನ್ ಆಫ್ ಗಿರಿಯಪ್ಪ ಅವರ ಹೆಸರಿಗೆ ಎಸಿ ಕಚೇರಿಯಲ್ಲಿ ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಡಿಸಿ ಕಚೇರಿಯಲ್ಲಿ ಆರ್. ಪಿ.ಸಂಖ್ಯೆ 102/2015 16 ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅಡಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ. ಇನ್ನು ಉಳಿಕೆ 3.24 ಎಕರೆ ಜಮೀನನಲ್ಲಿ 2.10ಎಕರೆ ನಮ್ಮ ಹೆಸರಿನಲ್ಲೇ ಇದೆ. ಈಗ ಪಹಣಿಯಲ್ಲಿ ಸರ್ಕಾರಿ ಫಡ ಎಂದು ಹೆಸರಿಸಿ,ಅಧಿಕಾರಿಗಳ ಮೂಲಕ ಕಬಳಿಸಲು ಯತ್ನಿಸುತ್ತಿದ್ದಾರೆ. ಬಾಡಿಗೆ ಗೂಂಡಾಗಳು ಹಾಗೂ ದಲ್ಲಾಳಿಗಳನ್ನು ಕರೆತಂದು ಬೆದರಿಸುತ್ತಿದ್ದಾರೆ ಎಂದು ಗಾಯಿತ್ರಮ್ಮ ಆರೋಪಿಸಿದರು.
ನಮ್ಮದು ಸಾಮಾನ್ಯ ಕುಟುಂಬ. ಈಗಾಗಲೇ ಸಾಕಷ್ಟು ನೊಂದು ಬೆಂದಿದ್ದೇವೆ. ನನ್ನ ಪತಿ ಕೆ.ರಾಜು ಅವರ ಆರೋಗ್ಯ ಸ್ಥಿತಿ ಕೂಡ ಸರಿಯಿಲ್ಲ. ನನ್ನ ನಾದಿನಿ ನ್ಯಾಯಾಲಯದಲ್ಲಿ ಭಾಗಾಂಶದ ದಾವೆ ಹೂಡಿ ತಡೆ ತಂದಿರುವವುದರಿಂದ ಭೂಗಳ್ಳರು ತಂತಿ ಬೇಲಿ ಹಿಂದೂ ಮುಂದೂ ನೋಡುತ್ತಿದ್ದಾರೆ. ಅಧಿಕಾರಿಗಳು ಕೂಡ ಬಲಾಢ್ಯರ ಪರ ನಿಂತು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಚಿಕ್ಕಬಳ್ಳಾಪುರದ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಬಳಿ ಯಾವುದೇ ರೀತಿ ದಾಖಲಾತಿಗಳಿಲ್ಲ. ದಾಖಲಾತಿಗಳಿಲ್ಲದೆ ಅಕ್ರಮವಾಗಿ ನಮ್ಮ ಜಾಗವನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಭೂಮಿ ನಮ್ಮ ಪೂರ್ವಿಕರಿಗೆ ಸೇರಿದ್ದು, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತು ಬಡವರ ಪರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯಲ್ಲಿ ಚಿಕ್ಕಬಳ್ಳಾಪುರದ ನಿವಾಸಿ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಮೇಲೆ ಡಿಕ್ಲರೇಷನ್ ಡಿಡೆಕ್ಷನ್ ಇಂಜೆಕ್ಷನ್ ಆರ್ಡರ್ ಇದೆ. ಪ್ರಸ್ತುತ ವಿಚಾರಣೆ ಹಂತದಲ್ಲಿದೆ. ಆದರೆ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೇ ಭೂಗಳ್ಳರು, ದಲ್ಲಾಳಿಗಳು ನಮ್ಮನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ನಮಗೆ ಪೊಲೀಸರು ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಕೋರಿದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…