ಸಕ್ಕರೆಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ತೂಬಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿರುದ್ಧ ಸಕ್ಕರೆಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಗೆದ್ದುಬೀಗಿದೆ.
ಸಕ್ಕರೆಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಾಲಿಬಾಲ್ ಕೋಚ್ ಮಧು ಕುಮಾರ್ ಅವರು ವಹಿಸಿರುತ್ತಾರೆ.
ಆಟಗಾರರ ಪಟ್ಟಿ…
ಬಸವರಾಜ್, ಮಂಜುನಾಥ್, ಪ್ರವೀಣ್, ಯೋಗೇಶ್, ನಂದನ್, ವಿನೋದ್, ಕೃಷ್ಣ, ನಾರಾಯಣ, ಬಸವರಾಜ್, ರೋಹಿತ್, ರಾಹುಲ್.
ತಾಲೂಕು ಮಟ್ಟದಲ್ಲಿ ಪ್ರಥಮಸ್ಥಾನಕ್ಕೆ ಆಯ್ಕೆಯಾದ ಆಟಗಾರರನ್ನು ಶಾಲಾ ಮುಖ್ಯೋಪಾಧ್ಯಯರು ಸೇರಿದಂತೆ ಊರಿನ ಗ್ರಾಮಸ್ಥರು ಅಭಿನಂದಿಸಿ, ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ಗೆದ್ದು ಬರುವಂತೆ ಪ್ರೋತ್ಸಾಹಿಸಿದ್ದಾರೆ.