ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ: ಗ್ರಾಮಸ್ಥರಿಂದಲೇ ಅಬಕಾರಿ ಇಲಾಖೆಗೆ ದೂರು

ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ನಿವೃತ್ತ ಶಿಕ್ಷಕರಿಂದಲೇ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದೂ ಮದ್ಯಮಾರಾಟಗಾರರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ತಾಲ್ಲೂಕಿನ ಹಳೇಕೋಟೆ ಗ್ರಾಮದ ಯುವಕರು ಅಬಕಾರಿ ನಿರೀಕ್ಷಕರ ಕಚೇರಿಗೆ ದೂರು ನೀಡಿದ್ದಾರೆ.

ಮನವಿ ಸಲ್ಲಿಸಿದ ಬಳಿಕ ಗ್ರಾಮದ ಯುವಕ ಪುನೀತ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 10 ವರ್ಷಗಳಿಂದ ಗ್ರಾಮದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದೂ ದುಡಿಮೆಯನ್ನೇ ನಂಬಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ, ಅಕ್ರಮ ಮದ್ಯ ಮಾರಾಟ ಹೆಚ್ಚಳದಿಂದ ದಿನನಿತ್ಯ ಮನೆಗಳಲ್ಲಿ, ಊರುಗಳಲ್ಲಿ ಕುಡುಕರ ಗಲಾಟೆ, ಸಾಮಾನ್ಯ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ, ಇದರಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತಿದೆ.

ಅಕ್ರಮ ಮದ್ಯ ಮಾರಾಟಗಾರರು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿ ಸಂಸಾರಗಳನ್ನು ಹಾಳು ಮಾಡುತ್ತಿದ್ದು, ಇದರಿಂದ ಮಕ್ಕಳು ಹೆಂಗಸರು ಕೂಡ ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ, ದಿನನಿತ್ಯ ಗ್ರಾಮಗಳಲ್ಲಿ ಅವ್ಯಾಚ ಶಬ್ಧಗಳು, ನಿಂದನೆ ಹೆಚ್ಚಾಗುತ್ತಿದೆ.

ದೊಡ್ಡಬೆಳವಂಗಲ ಹೋಬಳಿಯ ಹಳೆಕೋಟೆ ಗ್ರಾಮದಲ್ಲಿ ಸುಮಾರು 150 ಕುಟುಂಬಗಳು ವಾಸವಾಗಿದ್ದು 7 ರಿಂದ 8 ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ, ಈ ಮದ್ಯ ಮಾರಾಟಗಾರರಲ್ಲಿ ಶಿಕ್ಷಕರೂ ಇರುವುದು ವಿಪರ್ಯಾಸ, ಈ ಸಮಸ್ಯೆ ಕುರಿತು ಹಲವು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಮನೆಗಳ ಮೇಲೆ ದಾಳಿ ಮಾಡಿ ಮದ್ಯ ವಶಕ್ಕೆ ಪಡೆದು ಸುಮ್ಮನಾಗುತ್ತಾರೆ, ಅಕ್ರಮ ಮದ್ಯ ಮಾರಾಟಗಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಇದೇ ಧೈರ್ಯದಿಂದ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಗ್ರಾಮದ ಹಲವು ಮನೆಗಳಲ್ಲಿ ಮತ್ತೆ ಮದ್ಯ ಮಾರಾಟ ಪ್ರಾರಂಭಿಸುತ್ತಿದ್ದಾರೆ,

ಹಳೇಕೋಟೆ ಗ್ರಾಮಕ್ಕೆ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಬೊಮ್ಮನಹಳ್ಳಿ, ಸಕ್ಕರೆಗೊಲ್ಲಹಳ್ಳಿ, ಜ್ಯೋತಿಪುರ, ಗ್ರಾಮಗಳಿಂದ ಮದ್ಯ ಬರುತ್ತಿದ್ದೂ ಸುತ್ತಲೂರಿನ ಜನರು ಗ್ರಾಮಕ್ಕೆ ಆಗಮಿಸಿ ಮದ್ಯ ಖರೀದಿಸಿ ಹೋಗುತ್ತಿದ್ದಾರೆ,

ಇನ್ನಾದರೂ ಅಧಿಕಾರಿಗಳು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಗ್ರಾಮದ ಜನತೆಯ ಕುಂಟುಬಗಳನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡರು.

ಈ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮದ ಯುವಕರು ಇದ್ದರು.

Leave a Reply

Your email address will not be published. Required fields are marked *