ತಾಲೂಕಿನ ಲಘುಮೇನಹಳ್ಳಿ ಗ್ರಾಮದಲ್ಲಿ ಫೆ.17ರ ರಾತ್ರಿ 11 ಗಂಟೆ ಸಮಯದಲ್ಲಿ ಚಿರತೆ ಪ್ರತ್ಯಕ್ಷವಾಗಿರೋ ಘಟನೆ ನಡೆದಿದೆ. ಚಿರತೆ ಓಡಾಡುವ ದೃಶ್ಯ ರೆಸಾರ್ಟ್ ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡವಾಗಿ ಬೆಳಕಿಗೆ ಬಂದಿದೆ.
ಚಿರತೆ ಇರುವ ದೃಶ್ಯ ಕಂಡು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ, ಚಿರತೆಯಿಂದ ಜನರು ಬೆಚ್ಚಿ ಬಿದ್ದಿದ್ದು, ಜೀವ ಭಯದಲ್ಲಿ ಮನೆಗಳಿಂದ ಹೊರಬರುತ್ತಿಲ್ಲ. ಒಬ್ಬೊಬ್ಬರೇ ಹೊಲ, ತೋಟದತ್ತ ತೆರಳಲು ಭಯಪಡುತ್ತಿದ್ದಾರೆ.
ಇತ್ತೀಚೆಗೆ ತಾಲೂಕಿನ ಬಚ್ಚಹಳ್ಳಿ, ಅಂತರಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ.
ಚಿರತೆಯಿಂದ ಅದೃಷ್ಟವಶಾತ್ ಇದುವರೆಗೂ ಯಾವುದೇ ಅಪಾಯವಾಗಿಲ್ಲ. ಅಪಾಯಕ್ಕೂ ಮುನ್ನ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದ ಸುತ್ತಮುತ್ತ ನೀಲಿಗಿರಿ ತೋಪುಗಳಿದ್ದು, ಚಿರತೆಯ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.