ತಾಲೂಕಿನ ಟಿ. ಹೊಸಹಳ್ಳಿಯಲ್ಲಿ ಕೆಂಪೇಗೌಡ ಜಯಂತೋತ್ಸವ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ 515 ನೇ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಡಾ. ಕೆ ಸುಧಾಕರ್, ಭಾರತ ದೇಶದ ಸಾವಿರಾರು ಸಾಮಂತ ರಾಜರ ಪೈಕಿ ಕೆಂಪೇಗೌಡರು ಮಾತ್ರ ಅಜರಾಮರವಾಗಿದ್ದಾರೆ. ನಾಡಿನ ಒಳಿತಿಗಾಗಿ ತನ್ನ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕ. ಕೆಂಪೇಗೌಡರು ದಕ್ಷ ಮತ್ತು ದೂರದೃಷ್ಟಿಯಳ್ಳ ಆಡಳಿತಗಾರನಾಗಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಪ್ಪಯ್ಯಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ. ಅವರ ಅನನ್ಯ ಸಾಧನೆಯ ಫಲವಾಗಿ ಇಂದು ಸಾವಿರಾರು ಜನ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಇದಕ್ಕೂ ಮೊದಲು ಟಿ.ಹೊಸಹಳ್ಳಿ ಗ್ರಾಮಕ್ಕೆ ಪ್ರಪ್ರಥಮವಾಗಿ ಆಗಮಿಸಿದ ಸಂಸದ ಡಾ ಕೆ ಸುಧಾಕರ್ ರವರಿಗೆ ಊರಿನ ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭದೊಂದಿಗೆ ಭರ್ಜರಿ ಸ್ವಾಗತ ಕೋರಿದರು‌. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಸದರೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಆನಂದ ಪಟ್ಟರು.

ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ನಾರಿನ ಮಹಾಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುರುವಿಗೆರೆ ನರಸಿಂಹಯ್ಯ, ಬಮೂಲ್ ನಿರ್ದೇಶಕ ಆನಂದ್, ವಕೀಲ ಪ್ರತಾಪ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್, ಯುವ ಮುಖಂಡ ಉದಯ ಆರಾಧ್ಯ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ರೈತ ಮುಖಂಡ ವಾಸು, ಮುರುಳಿ, ಕೆಂಪೇಗೌಡ ಆಚರಣೆ ಸಮಿತಿಯ ಪದಾಧಿಕಾರಿಗಳಾದ ಆರ್.ಜಿ.ಪಿ.ಎನ್ ಗಂಗಾಧರ್, ಚನ್ನೇಗೌಡ, ಕುಮಾರ್, ಚಂದ್ರಪ್ಪ, ಚನ್ನಕೇಶವ, ಚಂದ್ರು, ಗೌಡ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *