ತಾಲೂಕಿನ ಕೆಸ್ತೂರು ಗೇಟ್ ಬಳಿ ಭೀಕರ ಅಪಘಾತ:  ಸ್ಥಳದಲ್ಲೇ ಮೂರು ವರ್ಷದ ಮಗು ಸಾವು: ಇಬ್ಬರಿಗೆ ಗಂಭೀರ ಗಾಯ

ತಾಲೂಕಿನ ಕೆಸ್ತೂರು ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಂದು‌ ಮಗು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಮಧ್ಯಹ್ನ ನಡೆದಿದೆ.

ಧನ್ವಿತ್ (3) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಆಂಜಿನೇಯ, ಮಮತ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಗಾಯಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೊಡ್ಡಬಳ್ಳಾಪುರದ ತಿಪ್ಪಾಪುರ ಮೂಲದ ಕುಟುಂಬ. ಅಪಘಾತ ಮಾಡಿ ಲಾರಿಯನ್ನು ಒಂದು ಕಿ.ಮೀ ದೂರದಲ್ಲಿ ನಿಲ್ಲಿಸಿದ ಚಾಲಕ.

ದೇವಸ್ಥಾನಕ್ಕೆಂದು ಅಕ್ಕ, ಅಕ್ಕನ ಮಗ ಹಾಗೂ ತಮ್ಮ ಮೂರು‌ ಮಂದಿ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಘಟನೆಯಲ್ಲಿ ಅಕ್ಕನ ಮಗ ಧನ್ವಿತ್ (3) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಪೆಟ್ರೋಲ್ ಹಾಕಿಸಲೆಂದು ಬರುತ್ತಿದ್ದ ಬೈಕ್ ಗೆ ವಿರುದ್ಧ ದಿಕ್ಕಿನಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ.

ಹೆಚ್ಚಿನ‌ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

Leave a Reply

Your email address will not be published. Required fields are marked *