ಇನ್ನೇನು ಕೆಲ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ರಾಜಕೀಯ ನಾಯಕರು. ತಾಲೂಕಿನಾದ್ಯಂತ ರಾಜಕೀಯ ಬಂಟಿಂಗ್ಸ್, ಕಟೌಟ್, ಬ್ಯಾನರ್ ಗಳದ್ದೇ ದರ್ಬಾರು.
ರಾಜಕೀಯ ಪಕ್ಷವೊಂದು ಪ್ರಚಾರ ನಿಮಿತ್ತ ಮರದಲ್ಲಿ ನೇತು ಹಾಕಿದ್ದ ಬಂಟಿಂಗ್ಸ್ ಗೆ ಸಿಲುಕಿ ಅಮಾಯಕ ಕೋತಿಯೊಂದು ಪ್ರಾಣ ಬಿಟ್ಟಿದೆ.
ಮರಕ್ಕೆ ಕಟ್ಟಿದ್ದ ಬಂಟಿಂಗ್ಸ್ ನಿಂದ ಕೋತಿ ಮೃತಪಟ್ಟಿರುವ ಕರುಣಾಜನಕ ಘಟನೆ ತಾಲೂಕಿನ ಆರೂಡಿ ಗ್ರಾಮದಲ್ಲಿ ನಡೆದಿದೆ.
ರಾಜಕೀಯ ಪಕ್ಷದ ಬಂಟಿಂಗ್ಸ್ ನಲ್ಲಿ ಆಟವಾಡುವ ವೇಳೆ ಬಂಟಿಂಗ್ಸ್ ಗೆ ಕೋತಿಯ ಕುತ್ತಿಗೆಗೆ ಸುತ್ತಿಕೊಂಡಿದೆ. ಬಂಟಿಂಗ್ಸ್ ಬಿಗಿಯಾಗಿ ಕುತ್ತಿಗೆಗೆ ಸುತ್ತಿಕೊಂಡ ಕಾರಣ ಕೋತಿ ಸಾವನ್ನಪ್ಪಿದೆ.