ತಾಲೂಕಿನಿಂದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ- ತರಬೇತುದಾರ ಸುನೀಲ್

ತಾಲ್ಲೂಕಿನ ಕ್ರೀಡಾಪಟುಗಳು ಅತ್ಯಂತ ಪ್ರತಿಭಾನ್ವಿತರಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಕ್ರೀಡಾಕೂಟಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಹೆಸರನ್ನು ಪ್ರತಿನಿಧಿಸುವ ಸಾಮರ್ಥ್ಯ ಇದೆ. ನಮ್ಮ ಕ್ರೀಡಾಪಟುಗಳು ಅಭ್ಯಾಸ ನಡೆಸಲು ನಮ್ಮಲ್ಲಿ ಸಿಂಥೆಟಿಕ್ ಟ್ರ್ಯಾಕ್‌ನ ಅವಶ್ಯಕತೆ ಇದೆ ಮಕ್ಕಳು ಅಭ್ಯಾಸ ನಡೆಸಲು ತುಮಕೂರು ಜಿಲ್ಲೆ ಅಥವಾ ಬೆಂಗಳೂರಿನ ಟ್ರ್ಯಾಕ್ ನ ಮೇಲೆ ಅವಲಂಬಿತರಾಗಿದ್ದಾರೆ. ಈ ಕುರಿತು ಸರ್ಕಾರ ಅಥವಾ ಸ್ಥಳೀಯ ಕ್ರೀಡಾ ಇಲಾಖೆಯು ಗಮನಹರಿಸಬೇಕಿದೆ ಎಂದು ತರಬೇತುದಾರ ಸುನೀಲ್ ಅಭಿಪ್ರಾಯಪಟ್ಟರು.

ಮುಂದಿನ ಕ್ರೀಡಾ ಕೂಟದ ಬಗ್ಗೆ ಮಾಹಿತಿ ನೀಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನ ಯುವ ಕ್ರೀಡಾಪಟುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಈ ಸಂಬಂಧ ನಗರದ  ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕ್ರೀಡಾ ಕ್ಲಬ್ ನ ತರಬೇತಿದಾರ ಆನಂದ್ ಮಾತನಾಡಿ, ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರದ ಮಕ್ಕಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ನಮ್ಮಲ್ಲಿ ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳಿದ್ದು ತರಬೇತಿಗೆ ಬೇಕಾಗುವ ಅಗತ್ಯ ಸೌಲಭ್ಯಗಳ ಕೊರತೆ ಸೂಕ್ತ ರೀತಿಯಲ್ಲಿ ತರಬೇತಿಗೆ ಅಗತ್ಯವಾದ ಸೌಲಭ್ಯಗಳು ಲಭ್ಯವಾದರೆ  ಈ ಮಕ್ಕಳು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಕ್ರೀಡೆಗಳಲ್ಲಿ ಗೆದ್ದು ನಮ್ಮ ತಾಲ್ಲೂಕಿನ ಕೀರ್ತಿ ಹೆಚ್ಚಿಸುವುದರಲ್ಲಿ  ಸಂಶಯವಿಲ್ಲ ಎಂದರು.

ಮತ್ತೋರ್ವ ತರಬೇತುದಾರ ಆನಂದ್ ಮಾತನಾಡಿ, ಕಳೆದ ಬಾರಿಯೂ ನಮ್ಮ ತಾಲೂಕಿನ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು, ಸ್ಪರ್ಧೆಯ ಅಂತಿಮ ಘಟ್ಟದ ಹಂತ ಫೈನಲ್ ವರೆಗೆ ತಲುಪಿದ್ದರು. ಈ ಬಾರಿ ಗೆಲುವು ಸಾಧಿಸಿ ನಮ್ಮ ತಾಲ್ಲೂಕಿಗೆ ಕೀರ್ತಿ ತರುವ ವಿಶ್ವಾಸ ಇದೆ ಎಂದರು.

ಮಕ್ಕಳೊಂದಿಗೆ ಪೋಷಕರ ಪಾತ್ರ ತುಂಬಾ ದೊಡ್ಡದು ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಅವರ ಸಹಕಾರ ಶ್ಲಾಘನೀಯ ನಿರಂತರ ಅಭ್ಯಾಸ ಮತ್ತು ಮಕ್ಕಳ ಪರಿಶ್ರಮ ಈ ಭಾರಿ ಫಲಿಸಲಿದೆ ಎಂದರು.

ಯುವ ಕ್ರೀಡಾಪಟುಗಳು ಮಾತನಾಡಿ, ತರಬೇತಿಯನ್ನು ಅತ್ಯುತ್ತಮವಾಗಿ ಪಡೆದಿದ್ದೇವೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಮೆಡಲ್ ಗಳಿಸಿದ್ದು ರಾಷ್ಟ್ರ ಮಟ್ಟದಲ್ಲಿ ನಮ್ಮ ತಾಲೂಕಿನ ಕೀರ್ತಿಪತಾಕೆಯನ್ನು ಹಾರಿಸಲು ನಿರ್ಧರಿಸಿದ್ದೇವೆ. ಈ ಬಾರಿ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 20ಕ್ಕೂ ಅಧಿಕ ಯುವ ಕ್ರೀಡಾಪಟುಗಳು  ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಪೋರ್ಟ್ಸ್ ಕ್ಲಬ್ ನ ತರಬೇತಿದಾರರು, ಪೋಷಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *