ಎಸ್‌ಎಸ್‌ಎಲ್‌ಸಿ ಮೊದಲ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಯಶಸ್ವಿಯಾಗಿ ನೆರವೇರಿದ್ದು, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ 05 ಮಂದಿ ಗೈರಾಗಿದ್ದರು.
ತಾಲೂಕಿನಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲೂ ಮುಖ್ಯ ಅಧೀಕ್ಷಕರ ಕೊಠಡಿ ಮತ್ತು ಸಿ.ಸಿ.ಟಿ.ವಿ ಸುಪರ್ದಿಯಲ್ಲಿ ಪರೀಕ್ಷೆ ನಡೆಸಲಾಯಿತು.
ತಾಲೂಕಿನಲ್ಲಿ 16 ಸರ್ಕಾರಿ ಪ್ರೌಢಶಾಲೆಗಳು, 4 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಗಳು, 12 ಅನುದಾನಿತ ಪ್ರೌಢಶಾಲೆಗಳು, 30 ಅನುದಾನ ರಹಿತ ಪ್ರೌಢಶಾಲೆಗಳನ್ನು ಒಳಗೊಂಡಂತೆ ಒಟ್ಟು 62 ಪ್ರೌಢಶಾಲೆಗಳಿದ್ದು, ಈ ಪ್ರೌಢಶಾಲೆಗಳಿಂದ ಬಾಲಕರು 1861 ಮತ್ತು ಬಾಲಕಿಯರು 1817 ಒಟ್ಟು 3678 ಹೊಸ ವಿದ್ಯಾರ್ಥಿಗಳು ನೋಂದಣಿಯಾಗಿ, 05 ಮಂದಿ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ.
ಇವರಲ್ಲಿ ಮೊದಲ ದಿನವಾದ ಇಂದು 04 ಮಂದಿ ಹೊಸ ವಿದ್ಯಾರ್ಥಿಗಳು ಹಾಗೂ ಓರ್ವ ಪುನರಾವರ್ತಿತ ವಿದ್ಯಾರ್ಥಿ ಸೇರಿ 05 ಮಂದಿ ಗೈರು ಹಾಜರಾಗಿದ್ದರು.