ಇಂದು ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಸುರಿದ ಅಕಾಲಿಕ ಮಳೆ. ಗುಡುಗು ಮಿಂಚಿನ ಮಳೆಗೆ ಜೋಡೆತ್ತು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಂಟನಕುಂಟೆ ಗ್ರಾಮದಲ್ಲಿ ನಡೆದಿದೆ. ಕಂಟನಕುಂಟೆ ಗ್ರಾಮದ ಅಂಚೆ ರಂಗಯ್ಯನವರಿಗೆ ಸೇರಿದ 2 ಎತ್ತುಗಳು, 60 ರಿಂದ 70 ಸಾವಿರ ಬೆಲೆ ಬಾಳುವ ಜೋಡೆತ್ತು.
ಮನೆಯ ಪಕ್ಕದಲ್ಲಿದ್ದ ತೋಟದಲ್ಲಿ ತೆಂಗಿನ ಮರಕ್ಕೆ ಕಟ್ಟಿಹಾಕಿದ್ದ ಎರಡು ಎತ್ತುಗಳಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿವೆ. ಜೋಡೆತ್ತು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ.