ತಾಲೂಕಿನಲ್ಲಿ ಮಳೆ ಅವಾಂತರ: ಅಂಗನವಾಡಿ ಕಟ್ಟಡದ ಗೋಡೆ ಕುಸಿತ: ತಪ್ಪಿದ ಭಾರೀ ಅನಾಹುತ

ತಡರಾತ್ರಿ‌ ಸುರಿದ ಭಾರೀ ಮಳೆಗೆ ಅಂಗನವಾಡಿ ಕಟ್ಟಡದ ಗೋಡೆ ಕುಸಿದಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಎಂದಿನಂತೆ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬಂದಿದ್ದು, ಕಟ್ಟಡದ ಒಳಗೆ ಕುಳಿತಿದ್ದಾರೆ. ಈ ವೇಳೆ ದಿಢೀರ್ ಗೋಡೆ‌ ಕುಸಿತವಾಗಿದೆ. ಅದೃಷ್ಟವಶಾತ್ ಅಂಗನವಾಡಿಯಲ್ಲಿದ್ದ ಸುಮಾರು 10 ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಘಟನೆಯಿಂದ ಮಕ್ಕಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಅಪಾಯಕಾರಿಯಾಗಿದ್ದ ಸಜ್ಜೆಯ ಸಿಮೆಂಟ್ ಹೊದಿಕೆಯನ್ನು ತೆರವು ಮಾಡಿದ್ದಾರೆ‌.

Leave a Reply

Your email address will not be published. Required fields are marked *