
ತಾಯಿ ಜೊತೆ ಅಕ್ರಮ ಸಂಭಂಧ ಇಟ್ಟುಕೊಂಡಿದ್ದ ಪ್ರಿಯಕರನನ್ನ ಮಗ ನಡು ರಸ್ತೆಯಲ್ಲಿ ಕೊಚ್ಚಿ ಕೊಂದು ಶವದ ಬೆನ್ನ ಮೇಲೆ ಕಾಲಿಟ್ಟು ಪೊಲೀಸರಿಗಾಗಿ ಕಾದು ಶರಣಾದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಬರೋಬ್ಬರಿ 16 ಬಾರಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದಾನೆ.
ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿ.
ಈರಯ್ಯ ಮಠಪತಿ ಕೊಲೆ ಆರೋಪಿ. ನಿನ್ನೆ ಸಂಜೆ ರಸ್ತೆ ಮಧ್ಯೆ ಬರುತ್ತಿದ್ದ ಬಸಪ್ಪ ಹೊಸಮನಿಯನ್ನ ತಡೆದು ಹತ್ಯೆಗೈದು ಬಳಿಕ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿದ್ದಾಗಿ ಈರಯ್ಯ ಮಾಹಿತಿ ನೀಡಿದ್ದಾನೆ.

ಪೊಲೀಸರು ಬರುವವರೆಗೂ ರಸ್ತೆ ಮಧ್ಯೆ ಶವದ ಬೆನ್ನ ಮೇಲೆ ಕಾಲಿಟ್ಟು ನಿಂತಿದ್ದ ಆರೋಪಿ ಈರಯ್ಯನನ್ನ ಸವದತ್ತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹತ್ತು ವರ್ಷದ ಹಿಂದೆ ಈರಯ್ಯ ತಾಯಿ ಜೊತೆಗೆ ಬಸಪ್ಪ ಓಡಿ ಹೋಗಿದ್ದ. ಮತ್ತೆ ಗ್ರಾಮಕ್ಕೆ ವಾಪಾಸ್ ಬಂದಿದ್ದ. ಇದೇ ದ್ವೇಷ ಇಟ್ಟುಕೊಂಡು ಸಾರ್ವಜನಿಕವಾಗಿ ಹತ್ಯೆ ಮಾಡಿ ಈರಯ್ಯ ಅಟ್ಟಹಾಸ ಮೆರೆದಿದ್ದಾನೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…