ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಮೂವರು ಅಣ್ಣತಮ್ಮಂದಿರ ನಡುವೆ ತಗಾದೆ: ಅಣ್ಣನ ಕೊಲೆಯಲ್ಲಿ ಅಂತ್ಯ

ಒಂಭತ್ತು ತಿಂಗಳು ಹೊತ್ತು‌ಹೆತ್ತು ಬೆಳೆಸಿದ ಮಕ್ಕಳು ಮುಪ್ಪಾದಾಗ ತಂದೆ-ತಾಯಿಗೆ ಆಸೆರೆಯಾಗುತ್ತಾರೆ ಎಂಬ ಆಸೆರೆಯಿಂದ ಕೂಲಿನಾಲಿ ಮಾಡಿ ಬೆಳೆಸಿದ್ರು. ಆದ್ರೆ ತಂದೆ ಸತ್ತ ಮೇಳೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಕ್ಕಳೇ ತಂದೆಗೆ ಬರುವ ಸಾವಿರ ರೂಪಾಯಿ ಪಿಂಚಣಿಗಾಗಿ ಕಿತ್ತಾಡಿ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ…ಇಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತೀರಾ…

ಹೀಗೆ ತಾಯಿಯ ಪಿಂಚಣಿ ಹಣಕ್ಕಾಗಿ ಸ್ವಂತ ಅಣ್ಣನ ಮನೆಯ ಬಾಗಿಲನ್ನು ಹೊಡೆದಿರುವ ಅಣ್ಣತಮ್ಮಂದಿರು, ಮಕ್ಕಳಿಂದಲೇ ತನ್ನ ಹಿರಿಯ ಮಗನನ್ನು ದೊಣ್ಣೆಗಳಿಂದ ಭೀಕರವಾಗಿ ಕೊಲೆ ಮಾಡಿರುವ ದೃಶ್ಯಗಳು ಕಂಡು ಕಣ್ಣೀರಿಡುತ್ತಿರುವ ತಾಯಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದಲ್ಲಿ..

ಸ್ವಂತ ತಮ್ಮಂದಿರ ಕೈಯಲ್ಲಿ ಭೀಕರವಾಗಿ ಕೊಲೆಯಾಗಿರುವನ‌ ಹೆಸರು ನರಸಿಂಹಮೂರ್ತಿ.. ಮಾಡಿದೆಲ್ಲಾ ಮಾಡಿ ಅಮಾಯಕರಂತೆ ನಿಂತುಕೊಂಡಿರುವವರ ಹೆಸರು ರಾಮಾಂಜಿ ಹಾಗೂ ಗಂಗಾಧರಪ್ಪ ಇವರಿಬ್ಬರು ಒಡ ಹುಟ್ಟಿದ ಅಣ್ಣತಮ್ಮಂದಿರು..

ಇನ್ನೂ ಗಂಗಮ್ಮ ಹಾಗೂ ಹನುಮಂತರಾಯಪ್ಪ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಇದ್ರು..ಇನ್ನೂ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದ ಹನುಮಂತರಾಯಪ್ಪ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ..ಮೃತಪಟ್ಟ ನಂತರ ತಂದೆಯ ಪಿಂಚಣಿ ಹಣ ತಾಯಿಗೆ ಬರುತ್ತಿತ್ತು ಇದೆ ಹಣ ವಿಚಾರಕ್ಕೆ ಮೂವರ ಮಕ್ಕಳ ನಡುವೆ ತಗಾದೆ ಶುರುವಾಗಿದೆ..ನಾನೇ ತಾಯಿಯನ್ನು ನೋಡಿಕೊಳ್ಳುತ್ತಿದ್ದು ನನಗೆ ಹಣ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ನರಸಿಂಹಮೂರ್ತಿ ಹಾಗೂ ರಾಮಾಂಜಿ, ಗಂಗಾಧರಪ್ಪ ನಡುವೆ ಮಾತಿಗೆ ಮಾತು ಬೆಳೆದು ರಾಜಿಪಂಚಾಯತಿಗಳು ನಡೆದಿದೆ…ಆದ್ರೆ ಅಣ್ಣ ನರಸಿಂಹಮೂರ್ತಿ ನಮಗೆ ತಾಯಿಯ ಪಿಂಚಣಿ ಹಣ ನೀಡುವುದಿಲ್ಲಾ ಎಂದು ಕೋಪಗೊಂಡ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹಮೂರ್ತಿ ಮನೆ ಬಳಿ ಹೋಗಿ ಮನೆಯ ಬಾಗಿಲು ಒಡೆದು ಮನೆಯ ಒಳಗೆ ಇದ್ದ ನರಸಿಂಹಮೂರ್ತಿಯನ್ನು ದೊಣ್ಣೆಗಳಿಂದ ಒಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ..

ಇನ್ನೂ ತಂದೆ ಸತ್ತ ಮೇಲೆ ತಾಯಿಗೆ ಬರುತ್ತಿದ್ದ ಒಂದು ಸಾವಿರ ಪಿಂಚಣಿ ಹಣದಲ್ಲಿ ತನ್ನ ಹಿರಿಯ ಮಗ ನರಸಿಂಹಮೂರ್ತಿಗೆ ಒಂದು ಸಾವಿರ ರೂಪಾಯಿಯನ್ನು ಕೊಟ್ಟಿದ್ಲು..ಇದರಿಂದ ಕುಪಿತಗೊಂಡ ಇಬ್ಬರು ಮಕ್ಕಳು ನಮಗೂ ಹಣಕೊಡುವಂತೆ ಬೇಡಿಕೆ ಇಟ್ಟಿದ್ರು..ಇದೇ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ..

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ..

ಒಟ್ಟಾರೇ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬಂತೆ ಕೇವಲ ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವುದು ವಿರ್ಪಯಾಸವಾಗಿದೆ..

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

10 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

14 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

17 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

19 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago