ಒಂಭತ್ತು ತಿಂಗಳು ಹೊತ್ತುಹೆತ್ತು ಬೆಳೆಸಿದ ಮಕ್ಕಳು ಮುಪ್ಪಾದಾಗ ತಂದೆ-ತಾಯಿಗೆ ಆಸೆರೆಯಾಗುತ್ತಾರೆ ಎಂಬ ಆಸೆರೆಯಿಂದ ಕೂಲಿನಾಲಿ ಮಾಡಿ ಬೆಳೆಸಿದ್ರು. ಆದ್ರೆ ತಂದೆ ಸತ್ತ ಮೇಳೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಕ್ಕಳೇ ತಂದೆಗೆ ಬರುವ ಸಾವಿರ ರೂಪಾಯಿ ಪಿಂಚಣಿಗಾಗಿ ಕಿತ್ತಾಡಿ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ…ಇಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತೀರಾ…
ಹೀಗೆ ತಾಯಿಯ ಪಿಂಚಣಿ ಹಣಕ್ಕಾಗಿ ಸ್ವಂತ ಅಣ್ಣನ ಮನೆಯ ಬಾಗಿಲನ್ನು ಹೊಡೆದಿರುವ ಅಣ್ಣತಮ್ಮಂದಿರು, ಮಕ್ಕಳಿಂದಲೇ ತನ್ನ ಹಿರಿಯ ಮಗನನ್ನು ದೊಣ್ಣೆಗಳಿಂದ ಭೀಕರವಾಗಿ ಕೊಲೆ ಮಾಡಿರುವ ದೃಶ್ಯಗಳು ಕಂಡು ಕಣ್ಣೀರಿಡುತ್ತಿರುವ ತಾಯಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದಲ್ಲಿ..
ಸ್ವಂತ ತಮ್ಮಂದಿರ ಕೈಯಲ್ಲಿ ಭೀಕರವಾಗಿ ಕೊಲೆಯಾಗಿರುವನ ಹೆಸರು ನರಸಿಂಹಮೂರ್ತಿ.. ಮಾಡಿದೆಲ್ಲಾ ಮಾಡಿ ಅಮಾಯಕರಂತೆ ನಿಂತುಕೊಂಡಿರುವವರ ಹೆಸರು ರಾಮಾಂಜಿ ಹಾಗೂ ಗಂಗಾಧರಪ್ಪ ಇವರಿಬ್ಬರು ಒಡ ಹುಟ್ಟಿದ ಅಣ್ಣತಮ್ಮಂದಿರು..
ಇನ್ನೂ ಗಂಗಮ್ಮ ಹಾಗೂ ಹನುಮಂತರಾಯಪ್ಪ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಇದ್ರು..ಇನ್ನೂ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದ ಹನುಮಂತರಾಯಪ್ಪ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ..ಮೃತಪಟ್ಟ ನಂತರ ತಂದೆಯ ಪಿಂಚಣಿ ಹಣ ತಾಯಿಗೆ ಬರುತ್ತಿತ್ತು ಇದೆ ಹಣ ವಿಚಾರಕ್ಕೆ ಮೂವರ ಮಕ್ಕಳ ನಡುವೆ ತಗಾದೆ ಶುರುವಾಗಿದೆ..ನಾನೇ ತಾಯಿಯನ್ನು ನೋಡಿಕೊಳ್ಳುತ್ತಿದ್ದು ನನಗೆ ಹಣ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ನರಸಿಂಹಮೂರ್ತಿ ಹಾಗೂ ರಾಮಾಂಜಿ, ಗಂಗಾಧರಪ್ಪ ನಡುವೆ ಮಾತಿಗೆ ಮಾತು ಬೆಳೆದು ರಾಜಿಪಂಚಾಯತಿಗಳು ನಡೆದಿದೆ…ಆದ್ರೆ ಅಣ್ಣ ನರಸಿಂಹಮೂರ್ತಿ ನಮಗೆ ತಾಯಿಯ ಪಿಂಚಣಿ ಹಣ ನೀಡುವುದಿಲ್ಲಾ ಎಂದು ಕೋಪಗೊಂಡ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹಮೂರ್ತಿ ಮನೆ ಬಳಿ ಹೋಗಿ ಮನೆಯ ಬಾಗಿಲು ಒಡೆದು ಮನೆಯ ಒಳಗೆ ಇದ್ದ ನರಸಿಂಹಮೂರ್ತಿಯನ್ನು ದೊಣ್ಣೆಗಳಿಂದ ಒಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ..
ಇನ್ನೂ ತಂದೆ ಸತ್ತ ಮೇಲೆ ತಾಯಿಗೆ ಬರುತ್ತಿದ್ದ ಒಂದು ಸಾವಿರ ಪಿಂಚಣಿ ಹಣದಲ್ಲಿ ತನ್ನ ಹಿರಿಯ ಮಗ ನರಸಿಂಹಮೂರ್ತಿಗೆ ಒಂದು ಸಾವಿರ ರೂಪಾಯಿಯನ್ನು ಕೊಟ್ಟಿದ್ಲು..ಇದರಿಂದ ಕುಪಿತಗೊಂಡ ಇಬ್ಬರು ಮಕ್ಕಳು ನಮಗೂ ಹಣಕೊಡುವಂತೆ ಬೇಡಿಕೆ ಇಟ್ಟಿದ್ರು..ಇದೇ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ..
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ..
ಒಟ್ಟಾರೇ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬಂತೆ ಕೇವಲ ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವುದು ವಿರ್ಪಯಾಸವಾಗಿದೆ..
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…