ತಮ್ಮ ಮೇಲಿನ ಅಪರಾಧ ಪ್ರಕರಣವನ್ನ ಘೋಷಣೆ ಮಾಡಿಕೊಂಡ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ: ರಾಜ್ಯ ವಿಧಾನಸಭಯ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಧೀರಜ್‌ ಮುನಿರಾಜ್ ಅವರು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಅಡಿಯಲ್ಲಿ

ತಮ್ಮ ಮೇಲಿರುವ ಅಪರಾಧ ಪ್ರಕರಣದ ಸಂಖ್ಯೆ0014/2023 ರಂತೆ ಇದ್ದು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ.

ದೊಡ್ಡಬಳ್ಳಾಪುರದ ಪ್ರಧಾನ ಸಿವಿಲ್ ಹಾಗು ಜೆಎಂಎಫ್ ಸಿ ನ್ಯಾಯಾಲಯದಲ್ಲಿ IPC Section -171E ಆರೋಪಕ್ಕೆ‌ ಸಂಬಂಧಿಸಿದ ವಿಚಾರಣೆ ಬಾಕಿಯಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

2023 ರ ಏಪ್ರಿಲ್ 4 ರಂದು ಧೀರಜ್‌ ಮುನಿರಾಜ್ ರವರ ವಿರುದ್ಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಆರ್ ಸಂಖ್ಯೆ 04-04-2023 ರಂತೆ ಪ್ರಕರಣ ದಾಖಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿ ತಮ್ಮ ಮೇಲಿರುವ ಪ್ರಕರಣಗಳ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ‌ ನೀಡಿದ್ದರು.

ಪ್ರಸ್ತುತ ಸಾರ್ವಜನಿಕ‌ ಮಾಹಿತಿಗಾಗಿ‌ ತಮ್ಮ‌ ಮೇಲಿರುವ ಅಪರಾಧ‌ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *