ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸಿ ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್

ನಟಿ ತ್ರಿಷಾ ಜತೆ ಅಫೇರ್‌ ಆರೋಪ, ಹೆಂಡ್ತಿ ಡಿವೋರ್ಸ್‌ ಗೆ ಅರ್ಜಿ ವಿಚಾರ, ವಿಪಕ್ಷಗಳ ಟೀಕಾ ಪ್ರಹಾರ, ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌, ಜಂಟಲ್‌ಮನ್‌ ಖ್ಯಾತಿಗೆ ಕಳಂಕ, ಹೆಣ್ಮಕ್ಕಳ ಸಿಟ್ಟು.. ಇಷ್ಟೆಲ್ಲ ವಿರೋಧದ ಅಲೆಯನ್ನು ಒಂದೇ ಏಟಿಗೆ ಬಡಿದು ಹಾಕಿದ್ದಾರೆ, ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್‌.

ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸುವ ಮೂಲಕ, ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ್ಟಿದ್ದಾರೆ‌ ವಿಜಯ್.

ಆಡಳಿತಾರೂಢ ಡಿಎಂಕೆ ಪಕ್ಷ, ಉಚಿತಗಳನ್ನು ಘೋಷಿಸ್ತಿದ್ದಂತೆ ಎಚ್ಚೆತ್ತ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ಸಹ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೇ ಉಚಿತಗಳ ಮಹಾಪೂರವನ್ನೇ ಹರಿಸಿದ್ದಾರೆ.

1.  ಮಹಿಳೆಗೆ 60 ವರ್ಷ ತುಂಬುವವರೆಗೂ ತಿಂಗಳಿಗೆ ತಲಾ 2500 ರೂ.

2. ಪ್ರತಿ ವರ್ಷಕ್ಕೆ 6 ಉಚಿತ ಗ್ಯಾಸ್‌ ಸಿಲಿಂಡರ್‌

3. ಮದುವೆಯಾಗುವ ಹುಡುಗಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ

4. ಹೆಣ್ಣು ಮಗು ಹುಟ್ಟಿದರೆ ಚಿನ್ನದ ಉಂಗುರ

5. ತಮಿಳುನಾಡಿನಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್‌ ಗಳಲ್ಲಿ ಪ್ರಯಾಣ ಉಚಿತ

6. ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಉಚಿತ ನ್ಯಾಪ್ಕಿನ್‌

7. ಮಹಿಳಾ ದೌರ್ಜನ್ಯ ಕೇಸ್‌ಗಳ ತ್ವರಿತ ವಿಚಾರಣೆಗೆ ಫಾಸ್ಟ್‌ ಟ್ರಾಕ್‌ ಕೋರ್ಟ್‌ ಸ್ಥಾಪನೆ..

ಹೀಗೇ ಇನ್ನೂ ಹಲವು ಮಹಿಳಾ ಪರ ಯೋಜನೆಗಳನ್ನು ಘೋಷಿಸಿದ್ದಾರೆ ವಿಜಯ್‌.

ತಿಂಗಳಿಗೆ 2500 ರೂ. ಕೊಡೋ ಯೋಜನೆಯಿಂದ ಸರಕಾರಿ ಮಹಿಳಾ ಉದ್ಯೋಗಿಗಳನ್ನು ಹೊರಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಸಕ್ಸಸ್‌ ಆಗಿದ್ದೇ ಆಗಿದ್ದು, ಆಂಧ್ರ ಬಳಿಕ ವಿಜಯ್‌ ಸಹ, ಸರಕಾರಿ ಬಸ್‌ನಲ್ಲಿ ಲೇಡಿಸ್‌ಗೆ ಫ್ರೀ ಅಂದಿದ್ದಾರೆ.

ಸ್ಟಾಲಿನ್‌ ನೇತೃತ್ವದ ಡಿಎಂಕೆ, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ಘೋಷಿಸಿದ್ರೆ, ವಿಜಯ್‌ 2500 ರೂ. ಪ್ರಕಟಿಸಿ, ಡಿಎಂಕೆಗೆ ಸಡ್ಡು ಹೊಡೆದಿದ್ದಾರೆ.

ಡಿಎಂಕೆ, 6 ರಿಂದ 12ನೇ ಕ್ಲಾಸ್‌ ಓದೋ ಹೆಣ್ಮಕ್ಕಳಿಗೆ ತಿಂಗಳಿಗೆ ತಲಾ 1 ಸಾವಿರ ಕೊಡ್ತೀವಿ ಅಂದ್ರೆ, ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಸ್ಕೂಲ್ ಹೋಗೋ ಹೆಣ್ಮಕ್ಕಳ ತಾಯಂದಿರಿಗೆ ವಾರ್ಷಿಕ 1500 ರೂ. ಘೋಷಿಸಿದ್ದಾರೆ.

ಹೆಣ್ಮಕ್ಕಳ ಗೋಲ್ಡ್‌ ವೀಕ್ ನೆಸ್ ಅರ್ಥ ಮಾಡ್ಕೊಂಡಿರೋ ವಿಜಯ್, ಚಿನ್ನದ ದರ ಏರುತ್ತಿದ್ರೂ ತಲೆಕೆಡಿಸಿಕೊಳ್ಳದೇ ಮದುಮಗಳಿಗೆ 8 ಗ್ರಾಂ ಚಿನ್ನ, ಹುಟ್ಟೋ ಮಗುವಿಗೆ ಉಂಗುರ ಕೊಡೋ ಆಸೆ ಹುಟ್ಟಿಸಿದ್ದಾರೆ.

ವಿಜಯ್‌ ಘೋಷಿಸಿದ ಉಚಿತ ಯೋಜನೆಗಳು ತಮಿಳುನಾಡಿನಲ್ಲಿ ಭಾರೀ‌ ಸದ್ದು ಮಾಡುತ್ತಿದೆ. ಪರ- ವಿರೋಧದ ಮಾತುಗಳ ಜಟಾಪಟಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆ..

ತಮಿಳರ ವೋಟ್‌ಗಾಗಿ ಹತ್ತು ಹಲವು ಉಚಿತ ಯೋಜನೆಗಳನ್ನು ಘೋಷಿಸಿ ಡಿಎಂಕೆ- ಡಿವಿಕೆ, ನೇರಾ ನೇರ ಫೈಟ್‌ಗಿಳಿದಿದೆ.

ನಾನೇ ಸಿಎಂ ಅನ್ನೋ ಆಸೆಯಲ್ಲಿರೋ ನಟ ವಿಜಯ್‌, ಪತ್ನಿ ಜತೆಗಿನ ಡಿವೋರ್ಸ್‌ ವಿವಾದ ತನ್ನ ವರ್ಚಸ್ಸಿಗೆ ಘಾಸಿ ಮಾಡುವ ಭೀತಿಯಲ್ಲಿ, ಮಹಿಳೆಯರಿಗೆ ಚಿನ್ನ, ದುಡ್ಡಿನ ಕನಸು ಭಿತ್ತಿದ್ದಾರೆ.

ಆದ್ರೆ, ಚಿನ್ನದ ಮಾತು ವಿಜಯ್ ಗೆ ವೋಟ್‌ ಆಗಿ ಬದಲಾಗುತ್ತಾ? ನೋಡ್ಬೇಕು.

ಉಚಿತ ಯೋಜನೆಗಳ ಬಗ್ಗೆ ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರೂ, ರಾಜಕೀಯ ಪಕ್ಷಗಳು ಕ್ಯಾರೆ ಅನ್ನುತ್ತಿಲ್ಲ ಅನ್ನೋದು ತಮಿಳುನಾಡು ವಿಚಾರದಲ್ಲಿ ದೃಢಪಟ್ಟಿದೆ.

Ramesh Babu

Journalist

Recent Posts

ವಸತಿ ಶಾಲಾ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ ದಾಳಿ: ಒಬ್ಬ ವಿದ್ಯಾರ್ಥಿ ಸಾವು: 8 ಮಂದಿಗೆ ಗಾಯ

ಬಳ್ಳಾರಿ ನಗರದ "ಗುರುಕುಲ ವಸತಿ ಶಾಲೆ"ಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ…

5 hours ago

ಮಾರ್ಚ್ – 8 ವಿಶ್ವ ಮಹಿಳಾ ದಿನ

ವಿಶ್ವ ಮಹಿಳಾ ದಿನ, ಮಾರ್ಚ್ - 8.......... ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯ ಸಂಸ್ಕೃತಿಯ ಮತ್ತೊಂದು…

9 hours ago

ಸಚಿವ ಕೆ.ಎಚ್ ಮುನಿಯಪ್ಪ ಸಿಎಂ ಆಗಲಿ-ಆರ್. ವಿ ಮಹೇಶ್ ಕುಮಾರ್

ಕೇಂದ್ರ ಮಾಜಿ ಸಚಿವರು, ಹಾಲಿ ರಾಜ್ಯ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮ…

22 hours ago

ಬೆಂ,ಗ್ರಾ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ: 10 ಸ್ಥಾನ ಗೆದ್ದ ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ ಸದಸ್ಯರು: ಶಾಸಕ ಧೀರಜ್ ಮುನಿರಾಜ್ ಅವರು ಅಭಿನಂದನೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ 10 ಸ್ಥಾನಗಳಲ್ಲೂ ಜಯಭೇರಿ ಭಾರಿಸಿದ ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ…

23 hours ago

ಕೆಲವು ಪಾಪರಾಜಿಗಳು ಮತ್ತು ನೆಟ್ಟಿಗರ ವಿಕೃತಿ……

ಇತ್ತೀಚೆಗೆ ಸಿನಿಮಾ ನಟಿಯರು ಪಾಪರಾಜಿಗಳು ಎಂದು ಕರೆಯಲ್ಪಡುವ ಕೆಲವು ಛಾಯಾಚಿತ್ರಗಾರರು ಮತ್ತು ಸಾಮಾಜಿಕ ಜಾಲತಾಣಗಳ ವಿಕೃತ ಮನಸ್ಸಿನ ಅತಿರೇಕಿಗಳ ಹುಚ್ಚಾಟಗಳಿಗೆ…

1 day ago

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘ ಪ್ರತಿಭಟನೆ: ಆದಷ್ಟು ಬೇಗ ನ್ಯಾಯಯುತ ಪರಿಹಾರ ಒದಗಿಸಲಾಗುವುದು- ಡಿಸಿಎಂ ಡಿಕೆಶಿ

"ಸಮಸ್ಯೆ ಬಗೆಹರಿಸಲು ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ನಾನು ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿ ಈ ಅಧಿವೇಶನದ ವೇಳೆ…

1 day ago