ತಡೆಗೋಡೆ ಕಟ್ಟಲು ಪಕ್ಕದ ಮನೆಯವನಿಂದ ಅಡ್ಡಗಾಲು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪ

ಯಲಹಂಕ : ತಡೆಗೋಡೆ ನಿರ್ಮಾಣಕ್ಕೆಂದು ಹೋದವರ ಮೇಲೆ ಪಕ್ಕದ ಮನೆಯವರು ಸುಖಾಸುಮ್ಮನೆ ದೌರ್ಜನ್ಯ ಎಸೆಗಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ, ಅಷ್ಟಕ್ಕೆ ಸುಮ್ಮನಾದ ಆತ ಮಚ್ಚನ್ನ ತನ್ನಿ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಿ, ತಮಗೆ ರಕ್ಷಣೆ ನೀಡುವಂತೆ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಯಲಹಂಕದ ಅಟ್ಟೂರು ಲೇಔಟ್ ನ ವೀರಸಾಗರ ಮುಖ್ಯರಸ್ತೆಯ ಕೃಷ್ಣಮೂರ್ತಿಯವರಿಗೆ ಸೇರಿದ ಸರ್ವೇ ನಂಬರ್ 36/1 ರಲ್ಲಿ ಘಟನೆ ನಡೆದಿದೆ.

ಕೃಷ್ಣಮೂರ್ತಿಯವರು ತಮ್ಮ 10 ಗುಂಟೆ ಜಾಗಕ್ಕೆ ಕೌಂಪೌಂಡ್ ನಿರ್ಮಿಸಲು ತಿರ್ಮಾನ ಮಾಡಿದ್ದರು. ಕೌಂಪೌಂಡ್ ನಿರ್ಮಾಣಕ್ಕೆ ಬೇಕಾದ ಹಾಲೋ ಬ್ರಿಕ್ಸ್ ಮತ್ತು ಎಂ.ಸಾಂಡ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಸರಬರಾಜು ಮಾಡಲು ಕೃಷ್ಣಮೂರ್ತಿ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಿದ್ದರು. ಒಪ್ಪಂದದ ಮೇರೆಗೆ  ಕೃಷ್ಣಮೂರ್ತಿ ಮತ್ತು ಆನಂದ್ ಅವರು ನವೆಂಬರ್ 1 ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಟ್ರ್ಯಾಕ್ಟರ್ ನಲ್ಲಿ ಎಂ ಸಾಂಡ್ ಸುರಿಯಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಮನೆಯವರಾದ ಮುನಿಯಪ್ಪ, ಹೆಂಡತಿ ಲಕ್ಷ್ಮಮ್ಮ ಹಾಗೂ ಮಗ ಅಶ್ವಥ್ ಆ ಕೆಲಸವನ್ನ ತಡೆದಿದ್ದಾರೆ ಎನ್ನಲಾಗಿದೆ.

ಸರ್ವೇ ನಂಬರ್ 36/1 ರಲ್ಲಿ ಒಂದು ಎಕರೆ 21 ಗುಂಟೆ ಜಾಗವಿದ್ದು, ಮುನಿಯಪ್ಪರವರಿಗೆ ಸೇರಿದ್ದು ಒಂದು ಎಕರೆ 11 ಗುಂಟೆ, ಇನ್ನುಳಿದ 10 ಗುಂಟೆ ಜಾಗ ಕೃಷ್ಣಮೂರ್ತಿಯವರಿಗೆ ಸೇರಿದ್ದು, ಆದರೆ ಮುನಿಯಪ್ಪ ಭೂದಾಖಲೆಗಳನ್ನ ತಿದ್ದಿ ಒಂದು ಎಕರೆ 21 ಗುಂಟೆ ಎಂದು ಪೋಡಿ ಮಾಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನ ಸೃಷ್ಠಿ ಮಾಡಿರುವು ಮುನಿಯಪ್ಪ ಮೇಲೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪ ಕುರಿತು ಮುನಿಯಪ್ಪರನ್ನ ಕೇಳಿದ್ದಾಗ, ಕೃಷ್ಣಮೂರ್ತಿಯವರ ಆರೋಪವನ್ನ ಅಲ್ಲಗೆಳೆಯುತ್ತಾರೆ, ಆದರೆ ಮೊಬೈಲ್ ವಿಡಿಯೋದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರೋದು ಮತ್ತು ಜೀವ ಬೆದರಿಕೆಯ ದೃಶ್ಯ ದಾಖಲಾಗಿದೆ.

ಅವಾಚ್ಯ ಶಬ್ದಗಳ ನಿಂದನೆ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ ಮುನಿಯಪ್ಪ ಮತ್ತು ಆತನ ಮಗನ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ, ಆದರೆ ಪೊಲೀಸರು ಇಲ್ಲಿಯವರೆಗೂ ಪ್ರಕರಣ ದಾಖಲು ಮಾಡದೆ ಇರುವುದು ಸಂಶಯಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *