ತಂದೆ-ತಾಯಿ ಹೇಳಿದ ಬುದ್ಧಿ ಮಾತಿಗೆ ಮನನೊಂದ ಯುವಕ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಮಾಡೇಶ್ವರ ಗ್ರಾಮ ಸಮೀಪವಿರುವ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಮಾಡೇಶ್ವರ ಗ್ರಾಮದ ನಿಖಿಲ್ ಕುಮಾರ್.ಎಸ್(28) ನೇಣಿಗೆ ಶರಣಾದ ಯುವಕ.
ಕಳೆದ ಎರಡು ತಿಂಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಮನೆಯಲ್ಲಿದ್ದ ಹಸುಗಳನ್ನು ಮೇಯಿಸುತ್ತಿದ್ದ. ಈ ವೇಳೆ ಸಾಲ ಮಾಡಿ ಒಂದು ಬೈಕನ್ನು ಖರೀದಿ ಮಾಡಿದ್ದನು. ಸಾಲ ಮಾಡಿ ಬೈಕ್ ಏಕೆ ಖರೀದಿ ಮಾಡಿದೆ. ಮಾಡಿರುವ ಸಾಲವನ್ನು ಹೇಗೆ ತೀರಿಸುತ್ತೀಯ ಎಂದು ತಂದೆ-ತಾಯಿ ಕೇಳಿದ್ದರು. ಈ ಕಾರಣಕ್ಕೆ ಮನನೊಂದ ಯುವಕ ನಿನ್ನೆ ಮಧ್ಯಾಹ್ನ ಹಸು ಮೇಯಿಸಲು ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಮೂಲಗ ಳಿಂದತಿಳಿದು ಬಂದಿದೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.