ತಂದೆಯ ಹೃದಯ ಸ್ಪರ್ಶಿ ತ್ಯಾಗ: ಮಗಳ ಜೀವ ರಕ್ಷಿಸಲು ಕಿಡ್ನಿ ದಾನ – ಮೆಡಿಕವರ್ ಆಸ್ಪತ್ರೆಯ ವೈದ್ಯಕೀಯ ಪರಿಣತಿಯ ಮತ್ತೊಂದು ಉದಾಹರಣೆ

ಬೆಂಗಳೂರು, ವೈಟ್‌ಫೀಲ್ಡ್: ಮಗಳಿಗೋಸ್ಕರ ಹೆತ್ತ ತಂದೆ ಏನೂ ಮಾಡೋಕೂ ರೆಡಿ ಅನ್ನೋದಕ್ಕೆ ಸಾಕ್ಷಿಯಂತೆ ಗಂಭೀರ ಸ್ಥಿತಿಯಲ್ಲಿದ್ದ ಮಗಳನ್ನು ರಕ್ಷಿಸಲು ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಮಗಳು ಅನುವಂಶೀಯದಿಂದ ಬರುವ ಬಹು-ಗುಳ್ಳೆ ಮೂತ್ರಪಿಂಡ ರೋಗ ( ADPKD)ದಿಂದ ಬಳಲುತ್ತಾ ಇದ್ದರು .ಇದರಿಂದ ಮೂತ್ರ ಪಿಂಡದ ವೈಫಲ್ಯವಾಗಿತ್ತು .

ಈ ಖಾಯಿಲೆ ಇವರ ಕುಟುಂಬಕ್ಕೆ ಹೊಸದೇನು ಅಲ್ಲ 2013ರಲ್ಲಿ, ಇದೇ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಪತ್ನಿಗೆ ಕಿಡ್ನಿ ದಾನ ಮಾಡಲು ಅವರು ಮುಂದೆ ಬಂದಿದ್ದರು. ಆದರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎದುರಿಸಿದ ತಾಂತ್ರಿಕ ಅಡಚಣೆಗಳ ಕಾರಣದಿಂದ ಆ ವೇಳೆ ಕಿಡ್ನಿ ಟ್ರಾನ್ಸ್‌ ಪ್ಲಾಟ್‌ ಮಾಡಲು ಸಾಧ್ಯವಾಗಿರಲಿಲ್ಲ.

ಈಗ ಆ ಸಮಸ್ಯೆ ಮತ್ತೆ ಮಗಳಿಗೆ ಸಂಭವಿಸಿದಾಗ, ಅವರ ಮೂತ್ರಪಿಂಡಗಳು ವೈಫಲ್ಯಗೊಂಡಾಗ, ತಂದೆಯವರು ಕ್ಷಣಮಾತ್ರವೂ ಯೋಚಿಸದೇ – ತಮ್ಮ ಏಕೈಕ ಮಗಳನ್ನು ಉಳಿಸಲು ಮತ್ತೆ ಮುಂದೆ ಬಂದರು.

61 ವರ್ಷದ ತಂದೆಗೆ ಮಧುಮೇಹ ಮತ್ತು ರಕ್ತದೊತ್ತಡ ತೊಂದರೆ ಇದ್ದರೂ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸಮಗ್ರ ಪರೀಕ್ಷೆಯಲ್ಲಿ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಅಂಗ ಹಾನಿಯ ಲಕ್ಷಣಗಳು ಕಾಣಿಸಲಿಲ್ಲ. ತಜ್ಞರ ಬಹು ವಿಶಿಷ್ಟ ತಂಡ ನಡೆಸಿದ ವಿಮರ್ಶೆಯ ನಂತರ, ಅವರನ್ನು ಮಾರ್ಜಿನಲ್ ಡೋನರ್ ಎಂದು ಸ್ವೀಕರಿಸಲಾಯಿತು.

ಈ ಜೀವ ರಕ್ಷಕ ಶಸ್ತ್ರಚಿಕಿತ್ಸೆಯನ್ನುಡಾ. ಹರೀಶ ಬಾಬು ಕೆ – ಹಿರಿಯ ನೇಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ತಜ್ಞ, ಡಾ. ಪ್ರಮೊದ್ – ಯೂರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ತಜ್ಞ, ಡಾ. ದಿಲೀಪ್ – ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕ ಇವರ ತಂಡ ಯಶಸ್ವಿಯಾಗಿ ನೆರವೇರಿಸಿದರು.ದಾನ ಮಾಡಿದ ಕಿಡ್ನಿ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

“ಸಮಗ್ರ ಮತ್ತು ನಿಖರವಾದ ವೈದ್ಯಕೀಯ ಮೌಲ್ಯಮಾಪನದ ಮೂಲಕ, ನಿಯಂತ್ರಣದಲ್ಲಿರುವ ಮಧುಮೇಹ ಮತ್ತು ರಕ್ತದೊತ್ತಡವಿದ್ದರೂ ಸಹ ಹಿರಿಯ ದಾನಿಗಳನ್ನುಸುರಕ್ಷಿತವಾಗಿ ಕಿಡ್ನಿ ದಾನಕ್ಕಾಗಿ ಪರಿಗಣಿಸಬಹುದು. ಇದು ಸೂಕ್ತ ದಾನಿಗಳ ಕೊರತೆಯಿಂದ ಬಳಲುವ ಅನೇಕ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿದೆ,” ಎಂದು ಡಾ. ಹರೀಶ ಬಾಬು ಕೆ ತಿಳಿಸಿದ್ದಾರೆ.

Ramesh Babu

Journalist

Recent Posts

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

2 hours ago

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ….3 ಕೋಟಿ ಮೌಲ್ಯದ 140 ಕೆಜಿ ಬೆಳ್ಳಿ ಅಭರಣಗಳ ಕಳವು

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…

6 hours ago

ಕಾಲೇಜಿನಿಂದ ಸಹೋದರನನ್ನು ಮನೆಗೆ ಕರೆದುಕೊಂಡು ಬರುವಾಗ ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ನಲ್ಲಿದ್ದ ಅಣ್ಣ ಸಾವು, ತಮ್ಮನಿಗೆ ಗಾಯ

ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…

9 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ರೌಂಡ್ಸ್​

ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…

10 hours ago

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

1 day ago

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…

1 day ago