ತಂತಿ ಬೇಲಿ ಕೆಡವಿ ಬಡ ರೈತ ಜಮೀನು ಕಬಳಿಸುವ ಸಂಚು ಆರೋಪ; ಸುಳ್ಳು ಆರೋಪ ಎಂದು ತಳ್ಳಿ ಹಾಕಿದ ಮುನೇಗೌಡ

 

ಏಕಾಎಕಿ ಜಮೀನಿಗೆ ನುಗ್ಗಿದ ಪುಂಡರ ಗ್ಯಾಂಗ್, ತಂತಿ ಬೇಲಿ ಕೆಡವಿ ಜಮೀನು ಅತಿಕ್ರಮ ಪ್ರವೇಶ ಮಾಡಿದ್ದಾರೆ, ಸ್ಥಳಕ್ಕೆ ಅಧಿಕಾರಿಗಳ ಕರೆಯದೆ, ತೆರವು ಕಾರ್ಯಾಚರಣೆಯ ನಡೆಸಿದ್ದಾರೆಂಬ ಆರೋಪವನ್ನ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಮಾಡಲಾಗಿತ್ತು. ಆದರೆ ಆರೋಪವನ್ನ ನಿರಕರಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸುಳ್ಳು ಆರೋಪ ಮಾಡುತ್ತಿರುವುದ್ದಾಗಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಟಿ.ಹೊಸಹಳ್ಳಿ ನಿವಾಸಿ ಆಂಜಿನಪ್ಪನವರ 2 ಎಕರೆ 12 ಗುಂಟೆ ಕಬಳಿಸುವ ಸಂಚನ್ನ ಭೂಗಳ್ಳರು ನಡೆಸಿದ್ದಾರೆ, ಆಂಜಿನಪ್ಪನವರ ತಂದೆ ರಾಮಯ್ಯನವರಿಗೆ ಕಾರಾನಾಳ ಸರ್ವೆ ನಂಬರ್ 168 ರಲ್ಲಿ ಸರ್ಕಾರದಿಂದ 2 ಎಕರೆ 12 ಗುಂಟೆ ಜಮೀನು ಮಂಜೂರಾಗಿತ್ತು.

ತಂದೆಯ ನಿಧನ ನಂತರ ಈ ಜಮೀನು ಆಂಜಿನಪ್ಪನವರಿಗೆ ಪೌವತಿ ಖಾತೆ ಆಗಿದೆ, ಇವರ ಜಮೀನು ಪಕ್ಕದಲ್ಲಿ ಸರ್ವೇ ನಂಬರ್ 169 ರಲ್ಲಿ ಗುಣ ಶೇಖರ್ ರವರಿಗೆ ಸೇರಿದ 1 ಎಕರೆ 6 ಗುಂಟೆ ಜಮೀನು ಇದ್ದು, ಜಮೀನಿನ ಉಳಿದ ಭಾಗ ಆಂಜಿನಪ್ಪ ಜಮೀನಿನಲ್ಲಿದೆ ಎಂದು ಸುಳ್ಳು ಆರೋಪ ಮಾಡುವ ರಿಯಲ್ ಎಸ್ಟೇಟ್ ಉದ್ಯಮಿ ಉದ್ಯಮಿಯೊಬ್ಬ ಮಧ್ಯ ಪ್ರವೇಶ ಮಾಡಿ ಕಿರುಕುಳ ಕೊಡುತ್ತಿದ್ದಾರೆ, ಜಮೀನು ಒತ್ತುವರಿ ತೆರವು ಮಾಡಬೇಕಾದರೆ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳು ಇರಬೇಕು, ಪೊಲೀಸ್ ಬಂದೋಬಸ್ತ್ ಇರಬೇಕು ಮತ್ತು ಜಮೀನು ಒತ್ತುವರಿ ತೆರವು ಮಾಡುವ ಬಗ್ಗೆ ರೈತನಿಗೆ ನೋಟಿಸ್ ನೀಡಬೇಕು, ಆದರೆ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿದ ರಿಯಲ್ ಎಸ್ಟೇಟ್ ಉದ್ಯಮಿ ತಂಡ ಏಕಾಏಕಿ ಬಂದು ತಂತಿ ಬೇಲಿ ಕೆಡವಿ ಜಮೀನು ಕಬಳಿಸುವ ಸಂಚು ನಡೆಸಿದ್ದಾರೆ ಎಂದು ಆಂಜಿನಪ್ಪ ಕುಟುಂಬ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಮಧು ಮತ್ತು ಆಂಜಿನಪ್ಪ ಮಾಡುತ್ತಿರುವ ಆರೋಪವನ್ನ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮುನೇಗೌಡ ಸಾರಾ‌ಸಗಟಾಗಿ ತಳ್ಳಿಹಾಕಿದ್ದಾರೆ, 2015ರಲ್ಲೇ ನಾನು ಸರ್ವೆ ನಂಬರ್ 169ರ ಒಂದು ಎಕರೆ ಜಮೀನನ್ನು ಯಶೋಧಮ್ಮನವರಿಗೆ ಮಾರಿದ್ದೇನೆ, ಗುಂಡಾಗಳನ್ನು ಬಿಟ್ಟು ಒತ್ತುವರಿ ತೆರವು ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ, ಅಕ್ಕನ ಗಂಡನೇ ಆಗಬೇಕಿದ್ದ ಆಂಜಿನಪ್ಪ, ಅಕ್ಕನ ಮಗಳ ಮದುವೆಗಾಗಿ 10 ಲಕ್ಷ ಮಗನ ಮದುವೆ 5 ಲಕ್ಷ ಹಣ ಕೊಟ್ಟಿದೆ. ಹಣ ವಾಪಸ್ ಕೇಳಿದಕ್ಕೆ ವಿನಾ ಕಾರಣ ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ, ಮುಂದೆಯೂ ಇದೇ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಆಂಜಿನಪ್ಪ ಮತ್ತು ಆತನ ಮಗನ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವ ಎಚ್ಚರಿಕೆಯನ್ನ ನೀಡಿದ್ದಾರೆ.

Ramesh Babu

Journalist

Recent Posts

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

5 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

5 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

16 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

17 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

17 hours ago