“ಡ್ರಗ್ಸ್ ಮುಕ್ತ ಕರ್ನಾಟಕ” ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ 5k ಮ್ಯಾರಥಾನ್ ಅನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು.
ಡ್ರಗ್ಸ್ ಮುಕ್ತ ಮತ್ತು ಸೈಬರ್ ಅಪರಾಧ ಕುರಿತ ಜಾಗೃತಿ ಮೂಡಿಸುವ ಮ್ಯಾರಥಾನ್ ಗೆ ನಟ ಧೃವ ಸರ್ಜಾ ಚಾಲನೆ ನೀಡಿದರು.
ಈ ಮ್ಯಾರಥಾನ್ ರಾಜನಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಿಂದ ಬೆಳಗ್ಗೆ 6:30ಕ್ಕೆ ಪ್ರಾರಂಭಗೊಂಡು ಇಟ್ಕಲ್ ಪುರ ಗ್ರಾಮದ ಸರ್ಕಾರಿ ಶಾಲೆ, ಆಂಜನೇಯ ಸ್ಟ್ಯಾಚು ನಂತರ ನೆಲಮಂಗಲ ಮುಖ್ಯ ರಸ್ತೆಯಲ್ಲಿ ಬಂದು ಪ್ರೆಸಿಡೆನ್ಸಿ ಕಾಲೇಜಿನ ಬಳಿ ಮುಕ್ತಾಯಗೊಂಡಿತು.
ಮ್ಯಾರಥಾನ್ ನಲ್ಲಿ ಶ್ರೀಮುರಳಿ, ನಿರೂಪಕ ಅಕುಲ್ ಬಾಲಾಜಿ, ನಟಿ ಮಾಳವಿಕಾ ಕಾಮತ್, ನಟಿ ಸ್ಪೂರ್ತಿ ಉಡಿಮನೆ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿ.ಪಂ ಸಿಇಒ ಡಾ.ಕೆ.ಎನ್.ಅನುರಾಧಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್ ಕುಮಾರ್. ಕೆ, ಕೆ.ಎಸ್.ನಾಗರಾಜ್, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್ ಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಇತರರು ಭಾಗವಹಿಸಿದ್ದರು.