
ಟಾಲಿವುಡ್ ನಟ ರೆಬೆಲ್ ಸ್ಟಾರ್ ಪ್ರಭಾಸ್ ಹೊಸ ವರ್ಷದ ಮುನ್ನಾದಿನದಂದು ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವ ತೆಲಂಗಾಣ ಸರ್ಕಾರದ ಮಿಷನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ನಮಗೆ ಜೀವನದಲ್ಲಿ ತುಂಬಾ ಸಂತೋಷಗಳಿವೆ, ನಮ್ಮಲ್ಲಿ ನಮ್ಮನ್ನು ಪ್ರೀತಿಸುವ ಜನರು ಮತ್ತು ನಮಗಾಗಿ ಬದುಕುವ ಕುಟುಂಬ ಸದಸ್ಯರಿದ್ದಾರೆ. ಆದ್ದರಿಂದ ಡ್ರಗ್ಸ್ ನಿಜವಾಗಿಯೂ ಅಗತ್ಯವಿದೆಯೇ ಡಾರ್ಲಿಂಗ್ಸ್ (ಪ್ರಭಾಸ್ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಡಾರ್ಲಿಂಗ್ಸ್ ಎಂದು ಕರೆಯುತ್ತಾರೆ)… ಇಂದೇ ಡ್ರಗ್ಸ್ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.
ನಿಮಗೆ ಯಾರಾದರು ಡ್ರಗ್ಸ್ ತೆಗೆದುಕೊಳ್ಳುವವರು ತಿಳಿದಿದ್ದರೆ. ಯಾರಾದರು ಮಾದಕ ವ್ಯಸನಿಗಳಾಗಿದ್ದರೆ, ನೀವು ಟೋಲ್-ಫ್ರೀ ಸಂಖ್ಯೆ 8712671111 ಗೆ ಕರೆ ಮಾಡಬಹುದು. ತೆಲಂಗಾಣ ಸರ್ಕಾರವು ಈ ಚಟವನ್ನು ಬಿಡಿಸಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.” ಎಂದು ಹೇಳಿದ್ದಾರೆ.