ಡೇಟಿಂಗ್ ಆ್ಯಪ್ ಯೂಸ್ ಮಾಡುತ್ತಿರುವ ಯುವತಿಯರೇ ಎಚ್ಚರದಿಂದಿರಿ. ಈ ಡೇಟಿಂಗ್ ಆ್ಯಪ್ ನಲ್ಲಿ ಕಾಮುಕರು ಆಕ್ಟಿವ್ ಆಗಿದ್ದು, ಆ್ಯಪ್ ನಲ್ಲಿ ಫೇಕ್ ಹೆಸರಲ್ಲಿ ಹುಡುಗಿಯರಿಗೆ ಮೋಸ ಮಾಡುತ್ತಿದ್ದಾರೆ.
ಕಾಮುಕರ ಅಟ್ಟಹಾಸಕ್ಕೆ ಡೇಟಿಂಗ್ ಆ್ಯಪ್ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ್ಯಪ್ ಫ್ರೋಫೈಲ್ ನಲ್ಲಿ ಹೀರೋ ರೀತಿ ಫೋಟೊ ಅಪ್ಲೋಡ್ ಮಾಡಿ, ಹುಡುಗಿಯರ ಸ್ನೇಹ ಬೆಳೆಸಿ ಮದುವೆ ಆಗುವ ನಾಟಕವಾಡೋದು.
ಯುವತಿಯೊಬ್ಬಳು ಬಂಬಲ್ ಆ್ಯಪ್ ನಲ್ಲಿ ಸಂಗಾತಿಯನ್ನ ಹುಡುಕುತ್ತಿದ್ದಳು. ಈ ವೇಳೆ ಅನಿರುದ್ದ್ ಎಂಬಾತನ ಫ್ರೋಫೈಲ್ ನಿಂದ ಮೆಸೇಜ್ ಯುವತಿಗೆ ಬಂದಿದೆ. ಅನಿರುದ್ದ್ ಚಾಟಿಂಗ್ ಮೂಲಕ ಯುವತಿಯ ಗಮನ ಸೆಳೆದಿದ್ದನು, ನಂತರ ಮುಖಾಮುಖಿ ಭೇಟಿಯಾದಾಗ ಯುವತಿ ಶಾಕ್ ಆಗಿದ್ದಾಳೆ. ಸ್ಥಳದಲ್ಲಿ ಅನಿರುದ್ಧ್ ನನ್ನು ನೋಡಿದಾಗ ಮುಸ್ಲಿಂ ಯುವಕ ಎಂದು ಗೊತ್ತಾಗಿದೆ. ಆತ ಅನಿರುದ್ದ್ ಅಲ್ಲ ಮುದಾಸಿರ್ ಎಂಬುದು ಗೊತ್ತಾಗಿದೆ. ಈ ವೇಳೆ ಆತ ನೀನು ನನ್ನನ್ನ ಪ್ರೀತಿಸುವುದಿಲ್ಲ ಅಂದುಕೊಂಡು ಈ ರೀತಿ ಮಾಡಿದ್ದೇನೆ ಎಂದು ಮನವೊಲಿಸಿದ್ದನು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು.
ತನ್ನ ತಾಯಿಗೆ ಹುಷಾರಿಲ್ಲ ಎಂದು ಯುವತಿ ಬಳಿ 1 ಲಕ್ಷ ಹಣ ಪೀಕಿದ್ದ, ಹಣ ಕೊಟ್ಟ ಒಂದು ತಿಂಗಳ ನಂತ ತನ್ನ ತಾಯಿ ತೀರಿ ಹೋಗಿದ್ದಾಳೆ ಎಂದು ನಾಟಕ ಮಾಡಿದ್ದನು. ನಾನು ನನ್ನ ತಮ್ಮನನ್ನ ನೋಡಲು ದುಬೈಗೆ ಹೋಗಿ ಬರುತ್ತೇನೆ ಎಂದು ಕಥೆ ಕಟ್ಟಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು, ನಂತರ ಕಾಮುಕ ಮುದಾಸಿರ್ ನ ಪತ್ತೆಗೆ ಯುವತಿ ಮುಂದಾಗಿದ್ದಳು. ಮುದಾಸಿರ್ ಸಹೋದರನನ್ನ ಸಂಪರ್ಕಿಸಿದ್ದಾಗ, ಆತನ ತಾಯಿ ತೀರಿ ಹೋಗಿಲ್ಲ ತಾಯಿ ಕಾಶ್ಮೀರದಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ಮುದಾಸಿರ್ ಬೆಂಗಳೂರಲ್ಲೇ ವಾಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯನ್ನ ಕಲೆ ಹಾಕಿದ ಯುವತಿ, ಮನೆ ಬಳಿ ಹೋದಾಗ ಯುವತಿ ಗೊತ್ತಾಗಿದೆ, ಉದಾಸಿರ್ ಮದುವೆಯಾಗಿ ಹೆಂಡತಿ ಜೊತೆ ವಾಸವಿದ್ದನು ಎಂಬುದು. ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು, ಘಟನೆ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.