
ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ರಾಜ್ಯಾದ್ಯಂತ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿ ಇಬ್ಬರು ಯುವಕರು ಮನೆಯಲ್ಲಿ ಕಾಲೇಜಿದೆ ಎಂದು ಸುಳ್ಳು ಹೇಳಿ ಡಿಯೋ ಬೈಕ್ ಎತ್ತಿಕೊಂಡವರು ರಸ್ತೆಯಲ್ಲಿ ಡೆಡ್ಲಿ ವೀಲಿಂಗ್ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ…
ಹರ್ಭಾಜ್ (18), ಮನೋಜ್ (18) ಮೃತಪಟ್ಟ ಯುವಕರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಿವಾಸಿಗಳಾದ ಈ ಯುವಕರಿಬ್ಬರು ಡೆಡ್ಲಿ ವಿಲೀಂಗ್ ಮಾಡಲು ಹೋಗಿ ಪ್ರಾಣವನ್ನೆ ಕಳೆದುಕೊಂಡಿದ್ದಾರೆ.
ಮಾಜಿ ಪ್ರಧಾನಿ ನಿಧನದ ಹಿನ್ನೆಲೆ ಇಂದು ರಜೆ ಇತ್ತು. ಆದ್ರೆ ಮನೆಯಲ್ಲಿ ಕಾಲೇಜಿಗೆ ಹೋಗಿ ಬರ್ತಿನಿ ಅಂತಾ ಮೃತ ಹರ್ಬಾಜ್ ಮನೆಯಲ್ಲಿದ್ದ ಡಿಯೋ ಬೈಕ್ ಎತ್ತಿಕೊಂಡು ಸ್ನೇಹಿತ ಮನೋಜ್ನನ್ನ ಕರೆದುಕೊಂಡು ಜಂಗಮಕೋಟೆ ಬಳಿಯ ಕಾಲೇಜು ಬಳಿ ಹೋಗಿದ್ದಾರೆ. ನಂತರ ಅಲ್ಲಿಂದ ವಿಜಯಪುರ ಬೈಪಾಸ್ ನಲ್ಲಿ ಡೆಡ್ಲಿ ವೀಲಿಂಗ್ ಗೆ ಮುಂದಾಗಿದ್ದು, ನೋಡ ನೋಡುತ್ತಿದ್ದಂತೆ ಮುಂದೆ ಬರುತ್ತಿದ್ದ ಕ್ಯಾಂಟರ್ಗೆ ಡಿಯೋ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ರಸ್ತೆಗೆ ಬಿದ್ದ ಯುವಕರು ತೀವ್ರ ರಕ್ತಸ್ತಾವ್ರವಾಗಿ ಇಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಅದೃಷ್ಟವಷತ್ ಕ್ಯಾಂಟರ್ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯೋದು ತಪ್ಪಿಸಿಕೊಂಡಿದೆ.

ಬೈಕ್ ವೀಲಿಂಗ್ ನಿಂದ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ್ದ ಬೈಪಾಸ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವಕರ ಮೃತದೇಹಗಳನ್ನ ದೇವನಹಳ್ಳಿ ಖಾಸಗಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಇನ್ನೂ ಯುವಕರು ಸಾವನ್ನಪ್ಪುವುದಕ್ಕೂ ಮುಂಚೆ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಹೋಗ್ತಿದ್ದ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ.
ಪಟ್ಟಣದ ರಸ್ತೆಗಳಲ್ಲಿ ಇತ್ತೀಚೆಗೆ ಡೆಡ್ಲಿ ವಿಲೀಂಗ್ ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದ್ದು, ಹಲವು ಭಾರಿ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜೊತೆಗೆ ಪ್ರಮುಖ ರಸ್ತೆಯಲ್ಲಿ ಸಿಸಿಟಿವಿ ಅಳವಡಿಸಿ ಇಂತಹ ಡೆಡ್ಲಿ ವಿಲೀಂಗ್ ಮಾಡುವವರ ವಿರುದ್ದ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಒಟ್ಟಾರೆ… ರಜೆ ಇದ್ದರು ಕಾಲೇಜಿಗೆ ಹೋಗಿ ಬರ್ತಿನಿ ಅಂತಾ ಇಬ್ಬರು ಯುವಕರು ಬೈಕ್ ನಲ್ಲಿ ರಸ್ತೆಗಿಳಿದು ಡೆಡ್ಲಿ ವೀಲಿಂಗ್ ಮಾಡಲು ಹೋಗಿ ಯುವಕರ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆಡ್ಲಿ ವೀಲಿಂಗ್ ಮಾಡೋರ ವಿರುದ್ದ ಇನ್ನಾದರೂ ಕ್ರಮಕ್ಕೆ ಮುಂದಾಗಬೇಕಿದೆ. ಜೊತೆಗೆ ಮೈಮರೆತು ಡೆಡ್ಲಿ ವೀಲಿಂಗ್ ಮಾಡೋ ಯುವಕರು ಈ ಬಗ್ಗೆ ಎಚ್ಚೆತ್ತುಕೊಂಡರೆ ಒಳಿತು.