
ನೆಲಮಂಗಲ ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಲ್ಲರಬಾನವಾಡಿ ಹತ್ತಿರ ಆಟೋದಲ್ಲಿ ವ಼ೀಲಿಂಗ್ ಮಾಡುತ್ತಿದ್ದಂತಹ KA-05-B-1357 ಪ್ಯಾಸೆಂಜರ್ ಆಟೋ ಚಾಲಕನನ್ನು ನೆಲಮಂಗಲ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು. ನೆಲಮಂಗಲ ಸಂಚಾರ ಠಾಣೆಯಲ್ಲಿ ಮೋ/ಸಂ. 426/24 BNS. ಜೊತೆಗೆ 184.189. ರಿತ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡೆಡ್ಲಿ ಬೈಕ್ ವ಼ೀಲಿಂಗ್ ಆಯ್ತು, ಇದೀಗ ಮೂರು ಚಕ್ರದ ಪ್ಯಾಸೆಂಜರ್ ಆಟೋದಲ್ಲಿ ವ಼ೀಲಿಂಗ್ ಟ್ರೆಂಡ್ ಶುರುವಾಗಿದೆ. ರೀಲ್ಸ್ ಗಾಗಿ ಪುಂಡರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇನ್ನೊಬ್ಬರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಆಟೋ ವ಼ೀಲಿಂಗ್ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ಫುಲ್ ವೈರಲ್ ಆಗಿದೆ. ಸದ್ಯ ಆಟೋ ವ಼ೀಲಿಂಗ್ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
